ಶಾರ್ಟ್ ಸರ್ಕ್ಯೂಟ್: ಹೊತ್ತಿ ಉರಿದ ಬಸ್

0
13

ಹುಬ್ಬಳ್ಳಿ: ಕಾರವಾರ ರಸ್ತೆ ಬೈಪಾಸ್ ನಲ್ಲಿ ಪೂನಾದಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಬಸ್ ಶಾರ್ಟ್ ಸರ್ಕಿಟ್ ನಿಂದ ಹೊತ್ತಿ ಉರಿದ ಘಟನೆ ರವಿವಾರ ಬೆಳಗಿನ ಜಾವ ಸಂಭವಿಸಿದೆ.

ರೇಷ್ಮಾ ಟ್ರಾವೆಲ್ಸ್ ಕಂಪನಿಗೆ ಸೇರಿದ ಬಸ್ ಆಗಿದ್ದು, 30ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಗಿನ ಜಾವ 2ರ ವೇಳೆ ಬಸ್ ನಲ್ಲಿ ಏಕಾಏಕಿ ಸ್ಫೋಟವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ್ದಾರೆ.

ಕೆಲವೇ ಸಮಯದಲ್ಲಿ ಬಸ್ ಗೆ ಬೆಂಕಿ ಆವರಿಸಿದೆ. ಅಗ್ನಿಶಾಮಕ‌ ದಳ ಸಿಬ್ಬಂದಿ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಟೈರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ ಎಂದು ಖಾಸಗಿ ಬಸ್ ನವರು ತಿಳಿಸಿದ್ದಾರೆ. ಬಸ್ ನಲ್ಲಿ ಸುಗಂಧ ದ್ರವ್ಯ ಸಾಗಾಟ ಸಹ ನಡೆಯುವುದರಿಂದ, ಉಷ್ಣತೆಗೆ ಅದರಲ್ಲಿರುವ ಗ್ಯಾಸ್ ಸ್ಫೋಟಗೊಳ್ಳುವ ಸಾಧ್ಯತೆಯಿದೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ತಿಳಿಸಿದ್ದಾರೆ.

ಈ ಕುರಿತು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಗೋಕಾಕನಲ್ಲಿಂದು ಪಂಚಮಸಾಲಿ ಸಮಾವೇಶ: ಸ್ಥಳದಲ್ಲಿಯೇ ಬೀಡು ಬಿಟ್ಟ ಎಸ್ಪಿ
Next articleಸಿ.ಟಿ ರವಿಯವರೇ ನಿಮಗೆ ನಾಚಿಕೆ ಆಗಬೇಕು : ಮುತಾಲಿಕ್