ಚಿಕ್ಕೋಡಿ: ನದಿಯಲ್ಲಿನ ಮೋಟರ್ ಪಂಪಸೆಟ್ ತೆಗೆಯಲು ಹೋದಾಗ ವಿದ್ಯುತ್ ಸ್ಪರ್ಷಿಸಿ ರೈತ ಮೃತಪಟ್ಟ ಘಟನೆ ತಾಲೂಕಿನ ಮಲಿಕವಾಡ ಗ್ರಾಮದಲ್ಲಿ ನಡೆದಿದೆ. ವಡಗೋಲ ಗ್ರಾಮದ ಅಣ್ಣಪ್ಪ ನಾಯ್ಡು ಖೋತ (42) ಮೃತ ರೈತ.
ದೂಧಗಂಗಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿರುವ ಕಾರಣ ರೈತ ಅಣ್ಣಪ್ಪ ಸ್ನೇಹಿತನೊಂದಿಗೆ ಮಲಿಕವಾಡ ಬಳಿಯ ದೂಧಗಂಗಾ ನದಿಯಲ್ಲಿದ್ದ ಮೋಟಾರು ಪಂಪಸೆಟ್ ತೆಗೆಯಲು ಹೋಗಿದ್ದು, ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.