ವಿದ್ಯುತ್ ಅವಘಡ: ಅಜ್ಜ, ಅಜ್ಜಿ, ಮೊಮ್ಮಗಳು ಸಾವು

0
11

“ಬೆಳಗಾವಿ: ವಿದ್ಯುತ್ ಶಾಕ್ ತಗುಲಿ ಮೂವರು ದಾರುಣವಾಗಿ ಮೃತಪಟ್ಟರುವ ಘಟನೆ ಶಾಹು ನಗರದಲ್ಲಿ ಘಟನೆ.

ಅಜ್ಜ, ಅಜ್ಜಿ, ಮೊಮ್ಮಗಳು ಸ್ಥಳದಲ್ಲಿ ಸಾವು.ವಾಚಮನ್ ಕೆಲಸ ಮಾಡುತ್ತಿದ್ದ ಕುಟುಂಬ.ಈರಪ್ಪ ರಾಠೋಡ(53), ಶಾಂತವ್ವ ರಾಠೋಡ(45), ಮೊಮ್ಮಗಳಾದ ಅನ್ನಪೂರ್ಣಾ ರಾಠೋಡ(13) ಮೃತ ದುರ್ದೈವಿಗಳು.

ನಿರ್ಮಾಣ ಹಂತದ ಮನೆಗೆ ವಾಚಮನ್ ಕೆಲಸ ಮಾಡುತ್ತಿದ್ದ ರಾಠೋಡ ಕುಟುಂಬ. ನಿರ್ಮಾಣ ಹಂತದ ಕಟ್ಟಡಕ್ಕೆ ಮೋಟಾರ್ ಸ್ಟಾರ್ಟ್ ಮಾಡಿ ನೀರು ಹೊಡೆಯಲು ಹೋಗಿದ್ದ ಈರಪ್ಪನಿಗೆ ಕರೆಂಟ್ ಶಾಕ್ ತಗುಲಿ ಒದ್ದಾಡುತ್ತಿದ್ದುದನ್ನು ಕಂಡು ಆತನ ರಕ್ಷಣೆಗೆ ಹೋದ ಹೆಂಡತಿ, ಮೊಮ್ಮಗಳು ಮೃತಪಟ್ಟಿದ್ದಾರೆ.

ಮೃತರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾ ನಿವಾಸಿಗಳು. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ
ಮುಗಿಲು ಮುಟ್ಟಿದ್ದು,ಬೆಳಗಾವಿ ಎಪಿಎಂಸಿ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

ಶಾಹುನಗರದ ವಿದ್ಯುತ್ ಅನಾಹುತ ಸ್ಥಳಕ್ಕೆ ಧಾವಿಸಿ ಕಣ್ಣೀರಿಡುತ್ತಿರುವ ಜನಸ್ತೋಮ

Previous articleಗೋಕರ್ಣ ಆತ್ಮಲಿಂಗಕ್ಕೆ ದಿಗ್ವಿಜಯ ಸಿಂಗ್ ಪೂಜೆ
Next articleಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ ಬಂಧನ