ವಿದ್ಯಾನಗರಿಯಲ್ಲಿ ಗಾಳಿಯಲ್ಲಿ ಗುಂಡು

0
4

ಧಾರವಾಡ: ಬುಧವಾರ ಬೆಳಗಿನ ಜಾವ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದೆ. ಕರ್ನಾಟಕ ವಿಶ್ವ ವಿದ್ಯಾಲಯದ ಹಿಂದೆ ಇರುವ ಟೈವಾಕ್ ಫ್ಯಾಕ್ಟರಿ ಬಳಿ ಗುಂಡಿನ ಶಬ್ದ ಕೇಳಿ ಬಂದಿದ್ದು, ಯಾರಿಗೂ ಗಾಯವಾಗಿಲ್ಲ ಎನ್ನಲಾಗಿದೆ. ಸುಶಾಂತ ಅಗರವಾಲ ಎಂಬುವವರು ಲೈಸನ್ಸ್ ಹೊಂದಿದ ತಮ್ಮ ಪಿಸ್ತೂಲಿನಿಂದ ತಮ್ಮ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಸ್ಥಳಕ್ಕೆ ವಿದ್ಯಾಗಿರಿ ಪೊಲೀಸರು ದೌಡಾಯಿಸಿದ್ದು, ನಾಲ್ವರನ್ನು ವಿಚಾರಣೆಗೆ ಕರೆದುಕೊಂಡು ಠಾಣೆಗೆ ಹೋಗಿದ್ದಾರೆ.

Previous article‘ಮೆಕ್ಸಿಕೊ’ದಿಂದ ಬಂದ ಅಣ್ಣ ಧನಂಜಯ್‌
Next articleಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ ಬಂಧನ