ವಾಹನ ಸೇರಿ 40 ಲಕ್ಷ ಮೌಲ್ಯದ ಮದ್ಯ ವಶಕ್ಕೆ

0
22
ಅಕ್ರಮ ಮದ್ಯ ವಶಕ್ಕೆ

ಬೆಳಗಾವಿ: ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ವಶಕ್ಕೆ ಪಡೆದಿರುವ ಅಬಕಾರಿ ಅಧಿಕಾರಿಗಳು ವಾಹನ ಸೇರಿ ಒಟ್ಟು 40 ಲಕ್ಷ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬುಗಟೆ ಆಲೂರ ಗ್ರಾಮದ ಬಳಿ ನಡೆದಿದೆ.
ಹುಕ್ಕೇರಿ ತಾಲೂಕಿನ ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿರುವ ಬುಗುಟೆ ಆಲೂರ ತನಿಖಾ ಠಾಣೆಯಲ್ಲಿ ಕರ್ನಾಟಕ ರಾಜ್ಯದ ಪರ್ಮಿಟ್‌ಗಳನ್ನು ಪಡೆಯದೆ ಕೇವಲ ರಾಜಸ್ತಾನ ಹಾಗೂ ಗೋವಾ ರಾಜ್ಯದ ದಾಖಲಾತಿಗಳನ್ನು ಹೊಂದಿ ಅಕ್ರಮವಾಗಿ ಕರ್ನಾಟಕ ರಾಜ್ಯವನ್ನು ಪ್ರವೇಶಿಸಿದ ಮೇರೆಗೆ ಮಹಿಂದ್ರಾ ಪಿಕಪ್ ವಾಹನದಲ್ಲಿ 50 ಬಾಕ್ಸ್ (450ಲೀಟರ್) ವಿಸ್ಕಿಯ ಗೋವಾ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

Previous articleಮೀಸಲಾತಿ ವಿರೋಧಿಸಿ ಪ್ರತಿಭಟನೆ: ಬಿಎಸ್‌ವೈ ಮನೆ ಮೇಲೆ ಕಲ್ಲು ತೂರಾಟ
Next articleಹೊತ್ತಿ ಉರಿದ ಶಾಲಾ ಬಸ್‌