ವಂದೇ ಭಾರತ್ ರೈಲಿಗೆ ಮತ್ತೆ ಕಲ್ಲು

0
14

ಚಿಕ್ಕಮಗಳೂರು : ಚಿಕ್ಕಮಗಳೂರಿನ ಅರಸೀಕೆರೆ-ಬೀರೂರು ಮಧ್ಯೆ ಸಂಚರಿಸುತ್ತಿದ್ದ ವೇಳೆ ವಂದೇ ಭಾರತ್ ರೈಲಿಗೆ ಕಿಡಿಗೇಡಿಗಳು ಕಲ್ಲು ಹೊಡೆದಿದ್ದಾಗಿ ವರದಿಯಾಗಿದೆ. ಬೆಳಗ್ಗೆ 8.45ಕ್ಕೆ ಅರಸೀಕೆರೆ-ಬೀರೂರು ಮಧ್ಯೆ ಸಂಚರಿಸುತ್ತಿದ್ದಾಗ ವಂದೇ ಭಾರತ್ ರೈಲಿನ ಮೇಲೆ ಕಲ್ಲೆಸೆಯಲಾಗಿದೆ. ಕೆಲ ಹುಡುಗರು ಕಲ್ಲು ಎಸೆದಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲ್ಲು ಹೊಡೆದವರ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಕಲ್ಲು ಹೊಡೆದ ನಿರ್ದಿಷ್ಟ ಪ್ರದೇಶದ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿದುಬಂದಿದೆ.

Previous articleಬೆಲೆ ಏರಿಕೆ ಮಾಡಿ ವಸೂಲಿಗೆ ಇಳಿದಿದೆ
Next articleಕೆಜಿ ಟೊಮೆಟೊಗೆ 60: ಪಡಿತರ ಅಂಗಡಿಗಳಲ್ಲಿ ಮಾರಾಟ