ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ, ಪೇದೆ

0
22
ಹಾವೇರಿ

ರಾಣೇಬೆನ್ನೂರು: ನಾಲವತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ನಗರ ಠಾಣೆ ಪಿಎಸ್ಐ ಸುನೀಲ ತೇಲಿ ಮತ್ತು ಪೇದೆ ಸಚಿನ ಓಲೇಕಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ನಗರದ ಫಿರೋಜ ಎಂಬುವರಿಗೆ ಮನೆ ಬಾಡಿಗೆ ಹಣ ವಸೂಲಿ ಮಾಡಿಕೊಡಲು 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಬೇಡಿಕೆ ಇಟ್ಟಿದ್ದ 50 ಸಾವಿರ ರೂಪಾಯಿ ಹಣದಲ್ಲಿ ಇವತ್ತು ಫಿರೋಜ 40 ಸಾವಿರ ರೂ. ಹಣ ನೀಡಿದ್ದರು. ಈ ವೇಳೆ ದಾಳಿ ಮಾಡಿದ ದಾವಣಗೆರೆ ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್ ಆಗಿ ಪಿಎಸ್ಐ ಮತ್ತು ವಾಹನ ಚಾಲಕನನ್ನು ಬಲೆಗೆ ಬೀಳಿಸಿದ್ದಾರೆ. ಜನರಿಗೆ ನ್ಯಾಯ ಕೊಡಿಸಬೇಕಾದ ಪಿಎಸ್ಐ ಅವರೇ ಲಂಚದ ಹಣಕ್ಕೆ ಬೇಡಿಕೆ ಇಟ್ಟು ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿರುವುದು ವಿಪರ್ಯಾಸ. ಸದ್ಯ ಪಿಎಸ್ಐ ಸುನೀಲ ತೇಲಿ ಮತ್ತು ಪೇದೆ ಸಚೀನ ಓಲೇಕಾರರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ‌.

Previous articleಕೋಲಾರದಿಂದ ಸ್ಪರ್ಧಿಸೋಕೆ ಹೈಕಮಾಂಡ್‌ ಬೇಡ ಅಂದಿಲ್ಲ
Next articleವಿಜಯಪುರ: 4.64 ಲಕ್ಷ ಮನೆಗಳಿಗೆ ಕುಡಿವ ನೀರು ಒದಗಿಸುವ ಗುರಿ