ಲೋಕಾಯುಕ್ತ ದಾಳಿ: ಸಿಡಿಪಿಒ, ಓರ್ವ ಸಿಬ್ಬಂದಿ ಸೇರಿ 1.5 ಲಕ್ಷ ನಗದು ವಶಕ್ಕೆ

0
9

ಗಜೇಂದ್ರಗಡ: ತಾಲೂಕಿನ ಅಂಗನವಾಡಿಗಳಿಗೆ ಆಹಾರ ಪೂರೈಸಿದ್ದ ಗುತ್ತಿಗೆದಾರರನ ಬಿಲ್‌ಪಾಸ್ ಮಾಡಲು ೧.೬೦ ಲಕ್ಷ ರೂ.ಗೆ ಬೇಡಿಕೆಯಿಟ್ಟು, ಮುಂಗಡವಾಗಿ ಕಚೇರಿಯ ಸಿಬ್ಬಂದಿ ಮೂಲಕ ೧.೫೦ ಲಕ್ಷ ನಗದು ಪಡೆಯುವಾಗ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಒ) ಹಾಗೂ ಕಚೇರಿ ಸಿಬ್ಬಂದಿಯನ್ನು ವಶಕ್ಕೆ ಪಡೆದ ಘಟನೆ ಶನಿವಾರ ಪಟ್ಟಣದಲ್ಲಿ ನಡೆದಿದೆ.
ಕಳೆದ ವರ್ಷ ಅಕ್ಟೊಬರ್ ತಿಂಗಳನಲ್ಲಿನ ೪೨ ಲಕ್ಷ ರೂ. ಬಿಲ್ ಪಾವತಿಗೆ ಅನಿಲ್ ದೊಡ್ಡಿ ಎಂಬುವವರಿಂದ ೧.೬೦ ಲಕ್ಷ ರೂಪಾಯಿ ಹಣ ನೀಡಿದರೆ ಮಾತ್ರ ಬಿಲ್‌ಪಾಸ್ ಮಾಡುವದಾಗಿ ಎಂದು ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅನೀಲ್ ದೊಡ್ಡಿಯವರಿಂದ ಕಚೇರಿಯ ಸಿಬ್ಬಂದಿ ಜಗದೀಶ ಮೂಲಕ ೧.೫೦ ಲಕ್ಷ ನಗದು ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ಶಂಕರ ರಾಗಿ ಹಾಗೂ ಲೋಕಾಯುಕ್ತ ಸಿಪಿಐ ರವಿ ಪುರಶೋತ್ತಮ ಅವರ ನೇತೃತ್ವದ ತಂಡ ದಾಳಿ ಮಾಡಿ ಆರೋಪಿಗಳು ಹಾಗೂ ನಗದನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ.

Previous articleಪೊಲೀಸ್‌ ಪೇದೆ ವಿರುದ್ಧ ವಂಚನೆ ದೂರು
Next article12 ಲಕ್ಷ ಮೊತ್ತದ ಅಮೆರಿಕನ್ ಡೈಮಂಡ್ ಗಣೇಶ