ಲೈಂಗಿಕ ಕಿರುಕುಳ : ಇಂಗ್ಲಿಷ್ ಪ್ರಾಧ್ಯಾಪಕ ಅಮಾನತು

0
9

ಬಳ್ಳಾರಿ: ಲೈಂಗಿಕ ಕಿರುಕುಳದ ಆರೋಪದ ಮೇಲೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಿಜಿ ಸೆಂಟರ್‌ನ ಇಂಗ್ಲಿಷ್ ಪ್ರೊಫೆಸರ್ ಡಾ. ಚಾಂದ್‌ಬಾಷಾ ಎಂ. ಅವರನ್ನು ಸೇವೆಯಿಂದ ಅಮಾನತು ಮಾಡಿ ಗುರುವಾರ ಆದೇಶ ಜಾರಿ ಮಾಡಲಾಗಿದೆ.

ವಿಶ್ವವಿದ್ಯಾಲದಯ ರಿಜಿಸ್ಟ್ರಾರ್ ಅವರು ಈ ಆದೇಶವನ್ನು ಜಾರಿ ಮಾಡಿದ್ದು, ಕರ್ನಾಟಕ ಸಿವಿಲ್ ಸೇವೆಗಳ ಕಾಯ್ದೆ ಮತ್ತು ಕಾನೂನಾತ್ಮಕವಾಗಿ ಪಿಎಚ್‌ಡಿ ವಿದ್ಯಾರ್ಥಿನಿ ಸಲ್ಲಿಸಿದ್ದ ಲೈಂಗಿಕ ಕಿರುಕುಳದ ಲಿಖಿತ ಆರೋಪದ ಹಿನ್ನೆಲೆಯಲ್ಲಿ ಸುದೀರ್ಘ ವಿಚಾರಣೆ ನಡೆಸಿ, ಸಮಿತಿ ಸಲ್ಲಿಸಿದ ವರದಿಯನ್ನು ಸಿಂಡಿಕೇಟ್ ಸಭೆಯ ನಿರ್ಣಯದ ಪ್ರಕಾರ ಡಾ. ಚಾಂದ್‌ಬಾಷಾ ಎಂ. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಇಂಗ್ಲಿಷ್ ವಿಭಾಗದ ಪ್ರೊಫೆಸರ್ ಡಾ. ಚಾಂದ್‌ಬಾಷಾ ಎಂ. ಅವರ ಮೇಲೆ ಸಂಶೋಧನಾ ವಿದ್ಯಾರ್ಥಿನಿ ನವೆಂಬರ್ 7, 2022 ರಂದು ಲೈಂಗಿಕ ಕಿರುಕುಳ ಕುರಿತು ವಿಶ್ವವಿದ್ಯಾಲಯಕ್ಕೆ ಲಿಖಿತ ದೂರುಸಲ್ಲಿಸಿದ್ದರು.

Previous articleಸಿದ್ದರಾಮಯ್ಯನವರೇ ಮುಂದಿನ ಸಿಎಂ: ಮನಸೂರ ಶ್ರೀ ಭವಿಷ್ಯ
Next articleಕೋವಿಡ್ 19 : ಗಾಬರಿಯಾಗಬೇಕಿಲ್ಲ, ಎಚ್ಚರಿಕೆ ಅಗತ್ಯ : ಸಿಎಂ ಬೊಮ್ಮಾಯಿ