ಲಘು ವಿಮಾನ ಪತನ, ಕೂದಲೆಳೆ ಅಂತರದಲ್ಲಿ ಪೈಲಟ್‌ಗಳು ಪಾರು

0
17

ಚಾಮರಾಜನಗರ: ಲಘು ವಿಮಾನ ಪತನವಾಗಿದ್ದು, ಕೂದಲೆಳೆ ಅಂತರದಲ್ಲಿ ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾದ ಘಟನೆ ಜಿಲ್ಲೆಯ ಭೋಗಪುರದ ಹೊರವಲಯದ ಕೆ. ಮೂಕಹಳ್ಳಿಯಲ್ಲಿ ನಡೆದಿದೆ.
ಇದೊಂದು ಸೇನಾ ತರಬೇತಿ ವಿಮಾನವಾಗಿದ್ದು, ವಿಂಗ್ ಕಮಾಂಡರ್ ತೇಜಪಾಲ್ ಅವರಿಂದ ಭೂಮಿಕಾ ಅವರಿಗೆ ತರಬೇತಿ ನೀಡಲು ಬಂದಿದ್ದರು. ಈ ವೇಳೆ ತಾಂತ್ರಿಕ ಸಮಸ್ಯೆಯಿಂದ ವಿಮಾನ ಪತನವಾಗಿದೆ.
ವಿಮಾನ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಪೈಲಟ್‌ಗಳು ಪ್ಯಾರಾಚೂಟ್‌ಗಳ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ. ಇಬ್ಬರು ಪೈಲಟ್‌ಗಳನ್ನು ಹೆಲಿಕಾಪ್ಟರ್‌ನಲ್ಲಿ ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಮಾನ ಸಂಪೂರ್ಣ ಸುಟ್ಟು ಬೆಂಕಿಗೆ ಆಹುತಿಯಾಗಿದೆ.

Previous articleಸೆಲ್ಯೂಟ್, ಒದೆ ಎರಡೂ ಇದೆ, ನಿಮಗೆ ಯಾವುದು ಬೇಕು ಆಯ್ಕೆ ಮಾಡಿಕೊಳ್ಳಿ
Next articleಗ್ಯಾರಂಟಿ ಜಾರಿಯಾಗದೇ ಇದ್ರೆ ಹೋರಾಟ