ಹುಬ್ಬಳ್ಳಿ: ರೈಲಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ರೈಲ್ವೆ ಪೊಲೀಸರು ಬರೋಬ್ಬರಿ ೩೫.೪೪ ಲಕ್ಷ ಮೌಲ್ಯದ ೪೪ ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಉಣಕಲ್ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ರೈಲಿನ ಟಾಯ್ಲೆಟ್ ಹತ್ತಿರ ಇದ್ದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಗದಗನಿಂದ ಹೌರಾ ಕಡೆಯಿಂದ ವಾಸ್ಕೋ ಕಡೆಗೆ ಹೋಗುತ್ತಿದ್ದ ಶಾಲಿಮಾರ್-ವಾಸ್ಕೋ ಅಮರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಪತ್ತೆಯಾಗಿದೆ.
ಗದಗದಿಂದ ರೈಲಿನಲ್ಲಿ ಫಾಲೋ ಮಾಡಿಕೊಂಡು ಬಂದ ಪೊಲೀಸರು ಉಣಕಲ್ ಹತ್ತಿರ ಗಾಂಜಾ ಪತ್ತೆ ಹಚ್ಚಿದ್ದು, ಗಾಂಜಾ ಬ್ಯಾಗಗಳನ್ನು ಧಾರವಾಡ ರೈಲ್ವೆ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.
ಡಾರ್ಕ್ ಬ್ಲೆöÊ ಕಲರ್ ವೈಷ್ಣವಿ ರೈಸ್ ಪ್ಯಾಕೆಟ್‌ನಲ್ಲಿ ಹಸಿ ಗಾಂಜಾ ೬,೪೦ ಲಕ್ಷ ಮೌಲ್ಯದ ೮ ಕೆಜಿ, ೯.೨೮ ಲಕ್ಷ ಮೌಲ್ಯದ ೧೧ ಕೆಜಿ ೬೦೦ ಗ್ರಾಂ. ಮೂರು ಬಂಡಲ್‌ನಲ್ಲಿ ೬.೪೮ ಲಕ್ಷ ಮೌಲ್ಯದ ೧೬ ಕೆಜಿ ಗಾಂಜಾ, ೪ ಬಂಡಲ್‌ನಲ್ಲಿದ್ದ ೭,೧೨ ಲಕ್ಷ ಮೌಲ್ಯದ ೮ ಕೆಜಿ ೯೦೦ ಗ್ರಾಂ ಗಾಂಜಾ, ಮತ್ತೊಂದು ಬ್ಯಾಗನಲ್ಲಿ ೫ ಕೆಜಿ ೧೦೦ ಗ್ರಾಂ ವಶಪಡಿಸಿಕೊಳ್ಳಲಾಗಿದೆ.
ಒಟ್ಟು ೬ ಬ್ಯಾಗನಲ್ಲಿ ೪೪.೩೦೦ ಗ್ರಾಂ ವಶಪಡಿಸಿಕೊಳ್ಳಲಾಗಿದ್ದು, ಇದರ ಸ್ಯಾಂಪಲ್‌ನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.