ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಸಾವು

0
12

ಬಳ್ಳಾರಿ:  ಮೆಂಥೋಪ್ಲಸ್ ಬಾಮ್​ನ ಚಿಕ್ಕ ಡಬ್ಬಿಯನ್ನು ನುಂಗಿ ೯ ತಿಂಗಳಿನ ಮಗು ಸಾವಿಗೀಡಾಗಿದ ಘಟನೆ ನಡೆದಿದೆ.
ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಇಂದಿರಾನಗರದಲ್ಲಿ ಈ ದುರಂತ ಸಂಭವಿಸಿದ್ದು, ಮೃತ ಮಗುವು ರಾಘವೇಂದ್ರ ಹಾಗೂ ತುಳಸಿ ದಂಪತಿಗೆ ಸೇರಿದೆ. ಮೃತ ಮಗುವು ಆಟವಾಡುತ್ತಿದ್ದಾಗ ಮೆಂಥೋಪ್ಲಸ್​​ ಕೈಗೆ ಸಿಕ್ಕಿದೆ. ಆ ವೇಳೆ ಮೆಂಥೋಪ್ಲಸ್ ಡಬ್ಬಿಯನ್ನು ಮಗು ನುಂಗಿದೆ. ಬಳಿಕ ಮಗುವಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪೋಷಕರು ಕೂಡಲೇ ಮಗುವನ್ನು ಖಾಸಗಿ ವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಗುವನ್ನು ತಪಾಸಣೆ ಮಾಡಿದ ವೈದ್ಯರು, ಮಗುವು ಮಾರ್ಗಮಧ್ಯೆಯೇ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.

Previous articleವಾಂತಿ-ಭೇದಿ: ಸ್ವಚ್ಛತೆಗೆ ಆದ್ಯತೆ ನೀಡಲು ಸೂಚನೆ
Next articleಇಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ