ಮೂವರು ಬೆಟ್ಟಿಂಗ್ ಕುಳಗಳ ಬಂಧನ

0
13


ಹುಬ್ಬಳ್ಳಿ: ದಕ್ಷಿಣ ಆಫ್ರಿಕಾ ಮತ್ತು ನೆದರಲ್ಯಾಂಡ್ ದೇಶಗಳ ನಡುವೆ ನಡೆದ ವಿಶ್ವಕಪ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಮೂವರು ಬೆಟ್ಟಿಂಗ್ ಕುಳಗಳನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ೨,೬೪ ಲಕ್ಷ ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿಯವರಾದ ಭವಾನಿನಗರದ ನವೀನ ಗಣಪತಿಸಾ ಜಿತೂರಿ(೨೮), ಶಾಂತಿನಗರದ ಮಹಮ್ಮದ್ ಅಬ್ದುಲಮಜಿ ಯರಗಟ್ಟಿ(೩೭) ಹಾಗೂ ವಿಕಾಸನಗರದಪವನ್ ತಿಪ್ಪಣ್ಣಸಾ ಇರಕಲ್(೩೦) ಬಂಧಿತರು.
ಡಾಕಪ್ಪ ಸರ್ಕಲ್ ಹತ್ತಿರ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದವರ ಮೇಲೆ ದಾಳಿ ಮಾಡಿದ ಸಿಸಿಬಿ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಮಾರುತಿ ಗುಳ್ಳಾರಿ ಮತ್ತು ಸಿಬ್ಬಂದಿ ೩ ಜನ ಆರೋಪಿಗಳನ್ನು ಬಂಧಿಸಿದ್ದು, ೨,೩೯,೬೨೦ ರೂ ಮತ್ತು ೨೫,೦೦೦ ರೂ ಮೌಲ್ಯದ ನಾಲ್ಕು ವಿವಿಧ ಕಂಪನಿಯ ಮೊಬೈಲ್‌ಗಳು ವಶಪಡಿಸಿಕೊಂಡಿದ್ದಾರೆ. ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಬೆಂಗಳೂರಿನಲ್ಲಿ ಅಗ್ನಿ ಅವಘಡ
Next articleನಿಮ್ಮನ್ನು ಡಿಕೆ ಬದಲು ಕೇಡಿ ಎಂದು ಕರೆಯಬಹುದಲ್ವಾ …?