ಮಾದರಿಯಾಗಿರುವ ನಿಮ್ಮಿಂದ ತಪ್ಪು ಸಂದೇಶ ರವಾನೆ ಬೇಡ

0
9
ಸೋನುಸೂದ್

ನಟ ಸೋನು ಸೂದ್ ಅವರು ತಮ್ಮ ನಟನೆಯ ಜೊತೆ ಸಾಮಾಜಿಕ ಸೇವೆಯೊಂದಿಗೆ ಹೆಚ್ಚು ಜನಪ್ರಿಯರಾಗಿದ್ದಾರೆ. ಅಲ್ಲದೇ ವಿವಿಧ ವಿಷಯಗಳ ಕುರಿತು ಸಾಮಾಜಿಕ ಜಾಗೃತಿ ಮಾಡುವುದರಲ್ಲಿ ಮುಂದೆ ಇದ್ದಾರೆ. ಆದರೆ, ಇತ್ತೀಚೆಗೆ ಅವರು ಮಾಡಿದ ಆ ಒಂದು ಕೆಲಸ ಟೀಕೆಗೆ ಒಳಗಾಗಿದ್ದಲ್ಲದೇ ಸೋನು ಸೂದ್ ಬೇರೆಯವರಿಂದ ಬುದ್ಧಿ ಹೇಳಿಸಿಕೊಳ್ಳುವ ಪರಿಸ್ಥಿತಿ ಬಂದೊಂದಗಿದೆ.
ಹೌದು, ಸೋನು , ಡಿಸೆಂಬರ್ 13 ರಂದು ದೆಹಲಿಯ ರೈಲ್ವೆಯಲ್ಲಿ ಪ್ರಯಾಣಿಸುತ್ತಿರುವಾಗ ರೈಲಿನ ಫುಟ್‌ ಬೋರ್ಡ್‌ ಬಳಿ ನಿಂತುಕೊಂಡಿದ್ದರು. ಕೆಲ ನಿಮಿಷ ಅಪಾಯಕಾರಿ ಎನ್ನುವಂತೆ ಕುಳಿತುಕೊಂಡಿದ್ದರು. ಈ ವಿಡಿಯೊ ಟ್ವಿಟರ್‌ನಲ್ಲಿ ಹರಿದಾಡಿತ್ತು.
ಇದೀಗ ಉತ್ತರ ರೈಲ್ವೆ ವಲಯ ಈ ವಿಡಿಯೊ ಹಂಚಿಕೊಂಡು ಸೂನು ಅವರಿಗೆ ಬುದ್ಧಿವಾದ ಹೇಳಿದೆ. ‘ಪ್ರೀತಿಯ ಸೋನು ಸೂದ್ ಅವರೇ, ಲಕ್ಷಾಂತರ ಜನರಿಗೆ ನೀವು ಮಾದರಿಯಾಗಿದ್ದೀರಿ. ರೈಲು ಓಡುವಾಗ ಮೆಟ್ಟಿಲುಗಳ ಬಳಿ ನಿಂತು ಪ್ರಯಾಣಿಸುವುದು ಅಪಾಯಕಾರಿ, ಈ ರೀತಿಯ ವೀಡಿಯೊ ನಿಮ್ಮ ಅಭಿಮಾನಿಗಳಿಗೆ ತಪ್ಪು ಸಂದೇಶ ಕಳುಹಿಸಬಹುದು. ದಯವಿಟ್ಟು ಇದನ್ನು ಮಾಡಬೇಡಿ, ಸುಗಮ, ಸುರಕ್ಷಿತ ಪ್ರಯಾಣವನ್ನು ಆನಂದಿಸಿ’ ಎಂದು ತಿಳಿ ಹೇಳಿದೆ.

Previous articleವಿಧಾನಸೌಧದಲ್ಲಿ 10.50 ಲಕ್ಷ ರೂ. ಅನಧಿಕೃತ ಹಣ ವಶ
Next articleಸ್ಫೋಟ ಮಾಡೋದಾಗಿ ಪೊಲೀಸ್ ಠಾಣೆಗೆ ಬೆದರಿಕೆ ಪತ್ರ