ಮನೆಯ ಗೋಡೆ ಕುಸಿದು ಯುವಕ ಸಾವು

0
6

ಚಿಕ್ಕೋಡಿ: ಸತತ ಮಳೆಯಿಂದ ಮನೆಯ ಗೋಡೆ ಕುಸಿದು ಯುವಕ ಮೃತಪಟ್ಟ ಘಟನೆ ಅಥಣಿ ಪಟ್ಟಣದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಅಥಣಿ ಪಟ್ಟಣದ ತಾಸೆ ಗಲ್ಲಿಯ ನಿವಾಸಿ ಕಾಶಿನಾಥ ಅಪ್ಪಾಸಾಬ ಸುತಾರ (23) ಮೃತ ಯುವಕ.
ರಾತ್ರಿಯಿಡಿ ಮಳೆ ಸುರಿದಿದ್ದು, ಮೇಲ್ಮುದ್ದಿ ಮನೆಯಾದ ಕಾರಣ ಮಳೆ ನೀರಿಗೆ ನೆನೆದು ಗೋಡೆ ಕುಸಿದಿದೆ. ಮನೆಯಲ್ಲಿ ಮಲಗಿದ್ದ ಕಾಶಿನಾಥ ಗೋಡೆಯ ಮಣ್ಣಿನಡಿ ಸಿಲುಕಿ ಕೊನೆಯುಸಿರು ಎಳೆದಿದ್ದಾನೆ. ಘಟನಾ ಸ್ಥಳಕ್ಕೆ ಯುವ ಮುಖಂಡ ಚಿದಾನಂದ ಸವದಿ ಭೇಟಿ ನೀಡಿ ಪರಿಶೀಲಿಸಿದರು. ಅಥಣಿ ಪಿಎಸ್ಐ ಹಾಗೂ ಸಿಪಿಐ ಭೇಟಿ ಪರಿಶೀಲನೆ ನಡೆಸಿದರು. ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಬಸವಸಾಗರ ಜಲಾಶಯಕ್ಕೆ 1,60,000 ಕ್ಯೂಸೆಕ್ ನೀರು
Next articleವೃತ್ತಿಪರ ಶಿಕ್ಷಣ ಪ್ರವೇಶ ಆರಂಭದಲ್ಲೇ ಅಕ್ರಮ