ಬೆಂಗಳೂರಿನಲ್ಲಿ ಪಾಕಿಸ್ತಾನ ಮೂಲದ ಯುವತಿ ಬಂಧನ

0
13

ಬೆಂಗಳೂರು: ಅಕ್ರಮವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಸವಾಗಿದ್ದ ಪಾಕಿಸ್ತಾನದ 19 ವರ್ಷದ ಯುವತಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಇಕ್ರಾ ಅವರ ಹೆಸರನ್ನು ರಾವ್ ಯಾದವ್ ಎಂದು ಬದಲಾಯಿಸಿ ಆಧಾರ್ ಕಾರ್ಡ್ ಪಡೆದಿದ್ದರು, ನಂತರ ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಕ್ರಾ ಅವರು ಇತ್ತೀಚೆಗೆ ಪಾಕಿಸ್ತಾನದಲ್ಲಿರುವ ತಮ್ಮ ಪೋಷಕರನ್ನು ಸಂಪರ್ಕಿಸಲು ಯತ್ನಿಸಿದ್ದರು. ಈ ಸಂಗತಿಯನ್ನು ಪತ್ತೆ ಮಾಡಿದ್ದ ಕೇಂದ್ರ ಗುಪ್ತದಳ, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇಕ್ರಾಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.

Previous articleಶಂಕರಾಚಾರ್ಯರನ್ನು ಅಧ್ಯಯನ ಮಾಡಿದರೆ ಸನಾತನ ಧರ್ಮಕ್ಕೆ ಮಾರ್ಗ
Next articleಕನ್ನಡದ ಹೆಸರಾಂತ ನಟ ಲಕ್ಷ್ಮಣ ಇನ್ನಿಲ್ಲ