ಬೆಂಕಿಯ ಕೆನ್ನಾಲಿಗೆಗೆ ದಂಪತಿ ಬಲಿ

0
8
ಬೆಂಕಿ

ಯಾದಗಿರಿ: ದಂಪತಿ ಬೆಂಕಿಯಲ್ಲಿ ಸಜೀವ ದಹನವಾದ ಘಟನೆ ಜಿಲ್ಲೆಯ ಸೈದಾಪುರ ಗ್ರಾಮದಲ್ಲಿ ಜರುಗಿದೆ
ಸೈದಾಪುರ ಸ್ಟೇಷನ್ ಏರಿಯಾದಲ್ಲಿ ವಾಸವಾಗಿದ್ದ ಪತಿ ರಾಘವೇಂದ್ರ ಹಾಗೂ ಪತ್ನಿ ಶಿಲ್ಪಾ ರಾಘವೇಂದ್ರ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ.ಅದೃಷ್ಟ ಎಂಬಂತೆ ಇವರ ಇರ್ವ ಮಕ್ಕಳು ಅಜ್ಜಿ ಮತ್ತು ತಾತ ಅವರೊಂದಿಗೆ ಕೆಳ ಅಂತಾಸ್ತಿನಲ್ಲಿ ಮಲಗಿದ್ದರು. ಮೊದಲ ಮಹಡಿಯ ಕೋಣೆಯಲ್ಲಿ ಮಲಗಿದ್ದ ದಂಪತಿಗಳು ಅಗ್ನಿಗೆ ಅಹುತಿಯಾಗಿದ್ದು ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಬೆಳಗಿನ ಜಾವಾ 4 ಗಂಟೆಯ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಗೊತ್ತಾಗಿದ್ದು. ಹತ್ತಿರದಲ್ಲಿ ಇದ್ದವರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ ಆದ್ರೂ ಅಸ್ಟೊತ್ತಿಗೆ ಆಗಲೇ ಇಬ್ಬರ ದೇಹ ಸುಟ್ಟು ಕರಕಲಾಗಿದ್ದವು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಘಟನೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸಿ. ಬಿ. ವೇದಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು.

Previous articleಕಾಂಗ್ರೆಸ್ ತೊರೆಯಲು ಮುಂದಾದ ಮಾಜಿ ಸಚಿವ
Next articleಎಲ್ ಆಂಡ್ ಟಿ ನಿರ್ವಹಣೆ ಹಿಂಪಡೆಯಲು ಒತ್ತಾಯ