ಬುದ್ಧಿ ಹೇಳಿದ್ದಕ್ಕೆ ಚಾಕು ಇರಿತ..!

0
13
ಡ್ರಿಂಕ್ಸ್

ಗದಗ: ಬುದ್ಧಿವಾದ ಹೇಳಿದ್ದಕ್ಕೆ ಸಾರಾಯಿ ಮತ್ತಿನಲ್ಲಿದ್ದ ಯುವಕರ ಗುಂಪೊಂದು ಮೂವರು ಯುವಕರ ಮೇಲೆ ಚಾಕುವಿನಿಂದ ತೀವ್ರವಾಗಿ ಹಲ್ಲೆ ಮಾಡಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಕಿಲ್ಲಾ, ಚಂದ್ರಸಾಲಿ ಪ್ರದೇಶದ ವಸಂತಸಾ ಬಾಕಳೆ, ಗೋಪಾಲಸಾ ಖೋಡೆ, ಮಾಧುಸಾ ಬದಿ ಎಂಬುವವರೇ ಗಾಯಾಳುಗಳಾಗಿದ್ದು, ಚಿಕಿತ್ಸೆಗಾಗಿ ಜಿಮ್ಸ್‌ಗೆ ದಾಖಲಿಸಲಾಗಿದೆ. ಯುವಕರಿಗೆ ಭುಜ, ಬೆನ್ನು ಎದೆ ಭಾಗಕ್ಕೆ ಚಾಕು ಇರಿತದ ಗಾಯಗಳಾಗಿವೆ.
ಪ್ರಕರಣ ವಿವರ: ನಿನ್ನೆ ತಡರಾತ್ರಿ ಜೋಡ ಮಾರುತಿ ದೇವಾಲಯದ ಮುಂದೆ ಕಿಲ್ಲಾ, ಚಂದ್ರಸಾಲಿ ಪ್ರದೇಶದ ವಸಂತಸಾ ಬಾಕಳೆ, ಗೋಪಾಲಸಾ ಖೋಡೆ, ಮಾಧುಸಾ ಬದಿ ಮಾತನಾಡುತ್ತ ನಿಂತಿದ್ದರೆನ್ನಲಾಗಿದೆ. ರಾತ್ರಿ ರಂಗನವಾಡಿ ಬಡಾವಣೆಯ ಸಾದಿಕ್ ಅಲ್ಲೊಳ್ಳಿ, ವಿನೇಶ್ ಶಿರಹಟ್ಟಿ, ಗಾಂಧಿ ನಗರದ ಶಿವಾನಂದ ಸೇರಿದಂತೆ ಐವರು ಕುಡಿದು ಬೈಕ್ ಮೇಲೆ ರಸ್ತೆಯಲ್ಲಿ ಯದ್ವಾತದ್ವಾ ಬಂದಿದ್ದಾರೆ. ದೇವಾಲಯದ ಮುಂದೆ ನಿಂತಿದ್ದ ಮೂರು ಜನರ ಮೈ ಮೇಲೆಯೇ ಬೈಕ್ ಹಾಯಿಸಲು ಪ್ರಯತ್ನಿಸಿದ್ದಾರೆ. ದೇವಾಲಯದ ಮುಂದೆ ಗದ್ದಲ ಗಲಾಟೆ ಮಾಡದಂತೆ ಪುಂಡರಿಗೆ ವಸಂತ, ಗೋಪಾಲ್ ಬುದ್ಧಿ ಹೇಳೋದಕ್ಕೆ ಮುಂದಾಗಿದ್ದಾರೆ. ಇದರಿಂದ ಸಿಟ್ಟಿಗೆದ್ದಿದ್ದ ಪುಂಡರ ಗುಂಪು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.
ಹಲ್ಲೆ ಮಾಡಿರುವ ಪುಂಡರು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಶಹರ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

Previous articleನನ್ನ ಫೋಟೋ ಕೂಡಾ ಪೊಲೀಸ್‌ ಸ್ಟೇಷನ್‌ನಲ್ಲಿತ್ತು..
Next articleಅಂಗವಿಕಲರ ಆರೋಗ್ಯಕ್ಕಾಗಿ ವಿಶೇಷ ವಿಮಾ ಯೋಜನೆ – ಸಿಎಂ ಬೊಮ್ಮಾಯಿ