ಬಾಗಲಕೋಟೆಯಲ್ಲಿ ಮೂವರ ಮೇಲೆ ಮಾರಣಾಂತಿಕ ಹಲ್ಲೆ: ನವನಗರ ಮತ್ತೆ ಉದ್ವಿಗ್ನ..!

0
10

ಬಾಗಲಕೋಟೆ: ನವನಗರದ ವಾಂಬೆ ಕಾಲೊನಿಯಲ್ಲಿ ಮೂವರ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು, ಘಟನೆ ಕೋಮು ಬಣ್ಣ ಪಡೆದುಕೊಳ್ಳುವ ಸಾಧ್ಯತೆಯಿದೆ.

ಮೂವರು ಯುವಕರ‌ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಘಟನೆ ಯಾತಕ್ಕಾಗಿ ನಡೆದಿದೆ ಎಂಬುದಕ್ಕೆ ಈವರೆಗೆ ಸ್ಪಷ್ಟತೆ ಸಿಕ್ಕಿಲ್ಲ.

ಮಾರಣಾಂತಿಕವಾಗಿ ಹಲ್ಲೆಗೊಳಗಾದ ಮೂವರು ಯುವಕರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಾಳುಗಳ ಕುಟುಂಬಸ್ಥರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದಾರೆ.

ಆಸ್ಪತ್ರೆಗೆ ಎಸ್ಪಿ ಜಯಪ್ರಕಾಶ, ಡಿವೈಎಸ್ಪಿ ಪ್ರಶಾಂತ ಮನ್ನೋಳಿ ಭೇಟಿ ಕೊಟ್ಟು ಆಸ್ಪತ್ರೆ ಆವರಣದಲ್ಲಿ ನೆರೆದಿದ್ದ ಜನರನ್ನು ಸಮಾಧಾನಪಡಿಸುವ ಕೆಲಸ ಮಾಡಿದ್ದಾರೆ.

ಘಟನೆ ವೈಯಕ್ತಿಕ ಹಿನ್ನೆಲೆಯಲ್ಲಿ ನಡೆದಿದೆಯೋ ಅಥವಾ ಗುರಿಯಾಗಿಸಿ ನಡೆಸಲಾಗಿದೆಯೋ ಎಂಬುದು ಸ್ಪಷ್ಟವಾಗಿಲ್ಲ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಳ್ಳುವರು.

Previous articleಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ಗೆ ಧರ್ಮಸ್ಥಳ ಧರ್ಮಾಧಿಕಾರಿ ಮೆಚ್ಚುಗೆ
Next articleಚಿಕ್ಕಮಗಳೂರು: ತಂತಿ ಬೇಲಿಗೆ ಸಿಲುಕಿದ ಚಿರತೆ