ಪೊಲೀಸರ ಹೆಸರು ಹೇಳಿ ಅಪಹರಣ: ಸಂಘಟನೆ ಮುಖಂಡನ ಬಂಧನ

0
14
ಸಂದೇಶ್

ಕೋಲಾರ: ಪೊಲೀಸರ ಹೆಸರು ಹೇಳಿಕೊಂಡು ಯುವಕನನ್ನು ಅಪಹರಣ ಮಾಡಿದ್ದ ಸಂಘಟನೆಯ ಮುಖಂಡನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಸಂದೇಶ್ ಎಂಬಾತನೇ ಬಂಧಿತ ವ್ಯಕ್ತಿ. ಯುವತಿಯೊಬ್ಬಳನ್ನು ಪ್ರೀತಿಸಿದ ಯುವಕ ವಿವಾಹಕ್ಕೆ ಒಪ್ಪದಿದ್ದ ಕಾರಣಕ್ಕೆ ಅಪರಹಣ ಮಾಡಲಾಗಿತ್ತು ಎನ್ನಲಾಗಿದೆ. ದೊಡ್ಡಬಳ್ಳಾಪುರದ ರಘುನಾಥಪುರ ಗ್ರಾಮದ ನಿವಾಸಿ ಸಂತೋಷ್ ಅಪಹರಣಕ್ಕೊಳಗಾಗಿದ್ದು, ನರಸಾಪುರದ ವಿಸ್ಟ್ರಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ ಅಲ್ಲಿಯೇ ಮೀನಾಕ್ಷಿ ಎನ್ನುವವಳನ್ನು ಪ್ರೀತಿಸಿದ್ದಾನೆ. ಆದರೆ, ಮೀನಾಕ್ಷಿ ಮದುವೆಯಾಗುವಂತೆ ಕೇಳಿಕೊಂಡಾಂಗ ಸಂತೋಷ ವಿವಾಹಕ್ಕೆ ನಿರಾಕರಿಸಿದ್ದಾನೆ, ಆಗ ಮದುವೆ ಮಾಡಿಸುವಂತೆ ಮೀನಾಕ್ಷಿ ಸಂಘಟನೆಯ ಮುಖಂಡ ಸಂದೇಶ್‌ನ ಮೊರೆ ಹೋಗಿದ್ದಾಳೆ.
ಹೀಗಾಗಿ ಫೆ. 12ರಂದು ರಾಜನಕುಂಟೆ ಬಳಿ ಪೋಲೀಸರ ಹೆಸರೇಳಿಕೊಂಡು ಯುವಕನನ್ನು ಅಪರಹರಣ ಮಾಡಿದ್ದ ಸಂದೇಶ್ ಅಂಡ್ ಟೀಂ ಸಂತೋಷನನ್ನು ಅಪರಹರಣ ಮಾಡಿ ಕೋಲಾರದ ಅಂಬೇಡ್ಕರ್ ನಗರದ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದಾನೆ. ಅಪರಹರಣಕ್ಕೊಳಗಾಗಿದ್ದ ಯುವಕನ ಪೋಷಕರಿಂದ ರಾಜನಕುಂಟೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರ ಅನ್ವಯ ಸದ್ಯ ಸಂದೇಶ್‌ ಪೊಲೀಸರ ಅತಿಥಿಯಾಗಿದ್ದಾನೆ.

Previous articleಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಎ. ಸ್ವಾಮಿ ನಿಧನ
Next articleಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಪ್ರಭಾಕರ್ ಚಿಣಿ