ಪಿಕ್ನಿಕ್ ತೆರಳಿದ್ದ ನಾಲ್ವರು ಯುವತಿಯರು ನೀರು ಪಾಲು

0
16

ಬೆಳಗಾವಿ:ಮಹಾರಾಷ್ಟ್ರ ಗಡಿಭಾಗದ ಕಿತವಾಡ ಫಾಲ್ಸ್ ಗೆ ಪಿಕ್ನಿಕ್ ತೆರಳಿದ ಬೆಳಗಾವಿಯ ನಾಲ್ವರು ಯುವತಿಯರು ನೀರುಪಾಲಾಗಿರುವ ದುರಂತ ಘಟನೆ ನಡೆದಿದೆ.

ಫಾಲ್ಸ್ ದಂಡೆಯಲ್ಲಿ ನಿಂತು ಪೋಟೋ ಗೆ ಫೋಸ್ ನೀಡುತ್ತಿದ್ದ ವೇಳೆ ಈ ನಾಲ್ವರೂ ನೀರಿಗೆ ಬಿದ್ದಿರುವ ಬಗ್ಗೆ ಹೇಳಲಾಗಿದೆ.
ಬೆಳಗಾವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ೪೦ ಜನರ ತಂಡ ಪಿಕ್ ನಿಕ್ ಹೊರಟಿದ್ದರು ಎಂದು ಗೊತ್ತಾಗಿದೆ.
ಶನಿವಾರ ಮಧ್ಯಾಹ್ನ ನಡೆದ ಈ ಘಟನೆ ಬೆಳಗಾವಿಗರ ಆತಂಕ ಹೆಚ್ಚು ಮಾಡಿದೆ.
ಕಿತವಾಡ ಫಾಲ್ಸ್ ದುರಂತದಲ್ಲಿ ಮೃತಪಟ್ಟವರು ಬೆಳಗಾವಿಯ ಮದರಸಾವೊಂದರ ವಿದ್ಯಾರ್ಥಿನಿಯರು.‌ ಇವರೆಲ್ಲರೂ ಮುಂಜಾನೆ ಹೋಗಿದ್ದು ಸಂಜೆಗೆ ವಾಪಸ್ ಆಗುವವರಿದ್ದರು. ಮೃತರು ಬೆಳಗಾವಿ ಅನಗೋಳ ನಿವಾಸಿಗಳಾದ ರುಕ್ಸಾನ ಬಿಸ್ತಿ(೨೦), ತಸ್ಮಿಯಾ ಅಶ್ರಫ್ ಬಿಸ್ತಿ (೨೦), ಕುಡುಚಿಯಾ ಪಟೇಲ(೨೦), ಉಜ್ವಲನಗರದ ಆಸ್ಮಿಯಾ ಮುಜಾವರ (೧೫)ಎಂದು ತಿಳಿದಿದೆ. ಒರ್ವ ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ

Previous articleರವೀಂದ್ರನಾಥ್ ನಿಲ್ಲದಿದ್ದರೆ ಸೂಕ್ತ ಅಭ್ಯರ್ಥಿ ಕಣಕ್ಕಿಳಿಸಲಿದ್ದೇವೆ: ಸಂಸದ ಜಿಎಂಎಸ್
Next articleಕರ್ನಾಟಕದ ಯಾವುದೇ ಪ್ರದೇಶ
ಬದಲಾವಣೆ ಆಗಲ್ಲ: ಸಿಎಂ ಬೊಮ್ಮಾಯಿ