ಪತ್ನಿ ಮೇಲೆ ಹಲ್ಲೆ ಮಾಡಿದ ಪತಿಗೆ ಜೈಲು ಶಿಕ್ಷೆ

0
21
ಜೈಲು

ಬಾಗಲಕೋಟೆ: ತನ್ನ ವಿಲಾಸಿ ಜೀವನಕ್ಕಾಗಿ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಆರೋಪಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ೨೦ ಸಾವಿರ ರೂ. ದಂಡ ವಿಧಿಸಲಾಗಿದೆ.
ಬೀಳಗಿ ಪೊಲೀಸ್ ಠಾಣೆ ವ್ಯಾಪ್ತಿಯ ರೊಳ್ಳಿ ಗ್ರಾಮದ ತಿರುಪತಿಗೌಡ ಗೋವಿಂದಗೌಡ ಪಾಟೀಲ ತನ್ನ ಹೆಂಡತಿ ಜತೆಗೆ ೨೦೧೯ರ ಮೇ ೧೬ರಂದು ಹಣ ನೀಡುವಂತೆ ಪೀಡಿಸಿ ಪತ್ನಿಯೊಂದಿಗೆ ಜಗಳ ಮಾಡಿದ್ದ ಆಗ ಆತನ ಮಕ್ಕಳು ಸಹ ತಿರುಪತಿಗೌಡನಿಗೆ ವಿರೋಧ ವ್ಯಕ್ತಪಡಿಸಿದ್ದ ಇದಾದ ನಂತರ ಮಕ್ಕಳನ್ನು ನನ್ನ ವಿರುದ್ಧ ಎತ್ತು ಕಟ್ಟುತ್ತಿಯಾ ಎಂದು ಪತ್ನಿಗೆ ಮಚ್ಚಿನಿಂದ ಹಲ್ಲೆ ನಡೆಸಲು ತಿರುಪತಿಗೌಡ ಯತ್ನಿಸಿದಾಗ ಮನೆಯವರು ಹಾಗೂ ನೆರೆಹೊರೆಯವರು ಸೇರಿದ್ದರಿಂದ ಇಂದು ಉಳಿದಕೊಂಡೆ ಎಂದು ತೆರಳಿದ್ದ ನಂತರ ಬೀಳಗಿ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾಣ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ದೇಶಪಾಂಡೆ ಅವರು ಹೆಂಡತಿ ಮೇಲಿನ ಹಲ್ಲೆ ಮಾಡಿದ ಅಪರಾಧ ಸಾಬೀತಾಗಿದೆ ಎಂದು ತೀರ್ಮಾಣಿಸಿ ಆರೋಪಿಗೆ ಕಲಂ ೩೦೭ ಐಸಿಸಿ ಅಡಿಯಲ್ಲಿನ ಆಪಾದನೆಗೆ ೫ ವರ್ಷ ಜೈಲು ಶಿಕ್ಷೆ ಮತ್ತು ೨೦ ಸಾವಿರ ರೂ.ಗಳ ದಂಡ ವಿಧಿಸಿ ಆದೇಶಿಸಿದ್ದಾರೆ ಎಂದು ಪ್ರಧಾನ ಸರ್ಕಾರಿ ಅಭಿಯೋಜಕ ವಿ.ಜಿ.ಹೆಬಸೂರ ತಿಳಿಸಿದ್ದಾರೆ.

Previous articleಅಧಿಕಾರಿಗಳ ಮೇಲೆ ಹಲ್ಲೆ: ಓರ್ವನ ಬಂಧನ
Next articleಮೀಸಲಾತಿಗೆ ಹೋರಾಟಗಳು ಫ್ಯಾನ್ಸಿಯಾಗಿವೆ