ಪತ್ನಿ ಜತೆ ಅನೈತಿಕ ಸಂಬಂಧ: ಪತಿಯಿಂದಲೇ ಯುವಕನ ಕೊಲೆ

0
11

ಬೆಳಗಾವಿ: ಜಿಲ್ಲೆಯ ಯರಗಟ್ಟಿ ತಾಲೂಕಿನ ಹಲಕಿ ಗ್ರಾಮದ ಸಮೀಪ ಹೆಂಡತಿ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಆಕೆಯ ಪತಿ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ.

ರಮೇಶ್ ಗುಂಜಗಿ(24) ಕೊಲೆಯಾದ ಯುವಕ. ಯಲ್ಲಪ್ಪ ಕಸೊಳ್ಳಿ ಎಂಬಾತ ಬರ್ಬರವಾಗಿ ಹತ್ಯೆಗೈದಿದ್ದಾನೆ. ಬೈಲಹೊಂಗಲ ತಾಲೂಕಿನ ವನ್ನೂರ ಗ್ರಾಮದ ನಿವಾಸಿಯಾಗಿರುವ ರಮೇಶ್ ಗುಂಜಗಿ, ಎರಡು ತಿಂಗಳ ಹಿಂದೆ ಮನೆ ಪಕ್ಕದ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದನು. ಈ ವಿಷಯ ತಿಳಿದ ಗಂಡ ಯಲ್ಲಪ್ಪ ಮತ್ತು ಆತನ ಗೆಳೆಯರು ಸೇರಿ ರಮೇಶ್ ನನ್ನು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ.

ಇನ್ನು ಇವರಿಬ್ಬರ ಅನೈತಿಕ ಸಂಬಂಧ ಗೊತ್ತಾಗಿ ಒಂದು ತಿಂಗಳ ಹಿಂದೆ ಗ್ರಾಮದಲ್ಲಿ ರಾಜಿ ಪಂಚಾಯಿತಿ ಮಾಡಲಾಗಿತ್ತು. ರಮೇಶ್ ಮಾಡಿದ ತಪ್ಪಿಗೆ ಯಲ್ಲಪ್ಪನಿಗೆ ಎರಡೂವರೆ ಲಕ್ಷ ದಂಡ ಕೂಡ ಕೊಟ್ಟಿದ್ದ. ಈ ವೇಳೆ ಮಹಿಳೆ ಗಂಡನನ್ನು ಬಿಟ್ಟು ರಮೇಶ್ ಮನೆಗೆ ಬಂದಿದ್ದಳು.

ಆದರೆ 15 ದಿನಕ್ಕೆ ಮತ್ತೆ ಗಂಡನ ಜತೆಗೆ ಸಂಪರ್ಕಕ್ಕೆ ಬಂದು, ತವರು ಮನೆ ಸೇರಿದ್ದಳು. ಇದೀಗ ರಮೇಶ್ ಬಿಟ್ಟು ಬಂದ ಆಕೆ, ಗಂಡನೊಂದಿಗೆ ಸೇರಿಕೊಂಡು ಹಾಗೂ 6 ಜನ ಗಂಡನ ಗೆಳೆಯರು ಸೇರಿ ಕೊಲೆ ಮಾಡಿಸಿದ್ದಾರೆಂದು ಕೊಲೆಯಾದ ರಮೇಶ್ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Previous articleಜೆಇಇ ಅಡ್ವಾನ್ಸ್ಡ್ ಫಲಿತಾಂಶ ಪ್ರಕಟ
Next articleಗೊಂದಲಕ್ಕೆ ಅವಕಾಶ ಕೊಡಬಾರದೆನ್ನುವ ಕಾರಣಕ್ಕೆ ಯೋಜನೆಗಳ ಅನುಷ್ಠಾನದಲ್ಲಿ ಸ್ವಲ್ಪ ವಿಳಂಬ