ಪತ್ನಿ ಕತ್ತು ಹಿಚುಕಿ ಕೊಲೆಗೈದ ಪತಿ

0
10

ಹುಬ್ಬಳ್ಳಿ: ಪತಿಯೇ ಪತ್ನಿಯನ್ನು ಕತ್ತು ಹಿಚುಕಿ ಕೊಲೆ ಮಾಡಿ ಪರಾರಿಯಾದ ಘಟನೆ ನಗರದ ನೇಕಾರನಗರದ ಬಸವೇಶ್ವರ ವೃತ್ತದ ಬಳಿ‌ ಸೋಮವಾರ ನಸುಕಿನ ಜಾವ ನಡೆದಿದೆ.
ಸುಧಾ ಶಿವಯ್ಯಾ ಹಿರೇಮಠ (೨೪) ಕೊಲೆಯಾದ ಮಹಿಳೆ. ಪತಿ ಶಿವಯ್ಯಾ ಹಿರೇಮಠ (೨೮) ಎಂಬಾತನೇ ಕುಡಿದ ಮತ್ತಿನಲ್ಲಿಯೇ ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬೆಳಗಿನ ಜಾವ ೧೨.೩೦ ರಿಂದ ಬೆಳಿಗ್ಗೆ ೯.೩೦ ರ ಮಧ್ಯದಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು, ಪತಿ ಶಿವಯ್ಯಾ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ, ಈತನು ಸಾಲದ ಬಾಧೆಯಿಂದ ಹಾಗೂ ಸಾರಾಯಿ ಕುಡಿತಕ್ಕೆ ಒಳಗಾಗಿದ್ದ ಎನ್ನಲಾಗಿದ್ದು, ಕೌಟುಂಬಿಕ ಕಲಹದಿಂದಾಗಿ ಜಗಳ ವಿಕೋಪಕ್ಕೆ ಹೋದ ಪರಿಣಾಮ ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಕಳೆದ ೨-೩ ವರ್ಷಗಳ ಹಿಂದೆ ಈ ಜೋಡಿ ಪರಸ್ಪರ ಪ್ರೀತಿಸಿ ಸುಧಾ ಹಾಗೂ ಶಿವಯ್ಯಾ ಮದುಯಾಗಿದ್ದರು. ಇವರಿಗೆ ಗಂಡು ಮಗು ಇದ್ದು, ಇದೀಗ ಮಗು ತಾಯಿಯನ್ನು ಕಳೆದುಕೊಂಡ ಘಟನೆ ಮನಕಲಕುವಂತಾಗಿದೆ. ಈ ಘಟನಾ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.

Previous articleಬಿಟ್ ಕಾಯಿನ್: ಮರು ತನಿಖೆ
Next articleರಾಣೆಬೆನ್ನೂರು ಡಿಪೋ ಆವರಣದಲ್ಲಿ ನೌಕರ ಆತ್ಮಹತ್ಯೆ ಪ್ರಕರಣ: ಇಲಾಖಾ ತನಿಖೆಗೆ ಆದೇಶ