ಪತ್ನಿಯ ಕಣ್ಣೆದುರೇ ಪತಿಯ ಹತ್ಯೆ

0
10

ಬೆಳಗಾವಿ: ದೇವಸ್ಥಾನ ಮುಂದೆ ಪತ್ನಿಯ ಎದುರೇ ಪತಿಯ ಬರ್ಬರ ಹತ್ಯೆಯಾದ ಘಟನೆ ನಡೆದಿದೆ, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಹಟ್ಟಿಯ ಬನಸಿದ್ದೇಶ್ವರ ದೇವಸ್ಥಾನ ಮುಂದೆ ನಡೆದಿದೆ. ಅಮಾವಾಸ್ಯೆ ಪೂಜೆಗೆಂದು ದಂಪತಿಗಳು ಎಂದು ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ, ಮೃತ ದುರ್ದೈವಿಯನ್ನು ಶಂಕರ್ ಸಿದ್ದಪ್ಪ ಜಗಮುತ್ತಿ(25) ಏಂದು ಗುರಿತಿಸಲಾಗಿದೆ, ಈ ದಂಪತಿಗಳು ಕಳೆದ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಬೆಳಗ್ಗೆ ಈ ಘಟನೆ ನಡೆದಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಊಹಾಪೋಹಗಳಿಗೆ ಕಿವಿಗೊಡಬೇಡಿ
Next articleಅವಹೇಳನಕಾರಿ ಇನ್​ಸ್ಟಾಗ್ರಾಂ ಪೋಸ್ಟ್​: ಸಂಘರ್ಷ