ಕಲಬುರಗಿ: ಪತ್ನಿ ಮೇಲೆ ದುರುಳ ಪತಿ ಬಂದುಕುನಿಂದ ಗುಂಡು ಹಾರಿಸಿ ಭೀಕರವಾಗಿ ಕೊಲೆಗೈದಿರುವ ಘಟನೆ ಗುರುವಾರ ನಡೆದಿದೆ. ಚಿತ್ತಾಪುರ ತಾಲೂಕಿನ ಅಲ್ಲೂರ ಕೆ ಗ್ರಾಮದ ಹಣಮವ್ವ(35) ಕೊಲೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ. ಆರೋಪಿ ಬಸವರಾಜ ಅಲ್ಲೂರ ಬಿ ಗ್ರಾಮದ ನಿವಾಸಿಯಾಗಿದ್ದು, ಪತ್ನಿ ತನ್ನ ತವರುಮನೆ ಅಲ್ಲೂರ ಕೆ ಗ್ರಾಮದಲ್ಲಿ ವಾಸವಾಗಿದ್ದಳು. ಪತಿ ಆಗಾಗ ಬಂದು ಹೋಗುತ್ತಿದ್ದರು. ಸ್ಥಳಕ್ಕೆ ಅಂಬಾಜಿ ಮೇಟಿ ಭೇಟಿ ನೀಡಿ ಪರಿ ಶೀಲಿಸಿದ್ದಾರೆ. ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ.