ಚಿಕ್ಕೋಡಿ : ನಿಪ್ಪಾಣಿ ಹೊರವಲಯದ ಬಾಳುಮಾಮಾ ನಗರದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ೧೫ ವರ್ಷದ ಬಾಲಕನ ಮೃತದೇಹ ಪತ್ತೆಯಾಗಿದೆ.
ನಿಪ್ಪಾಣಿಯ ಹಳೆ ಸಂಭಾಜಿ ನಗರದ ಸಾಕೀಬ್ ಪಠಾಣ್ ಕೊಲೆಯಾದ ಬಾಲಕ. ನಿರ್ಮಾಣ ಹಂತದ ಕಟ್ಟಡದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದ್ದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬಾಲಕನ ಹತ್ಯೆಗೈಯಲಾಗಿದೆ. ಕೊಲೆಗೀಡಾದ ಬಾಲಕ ನಿಪ್ಪಾಣಿಯ ಖಾಸಗಿ ಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಸ್ಥಳಕ್ಕೆ ನಿಪ್ಪಾಣಿ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.