ನಾಲ್ಕು ವಾಹನಗಳಿಗೆ ಬೆಂಕಿ

0
7

ಬೆಳಗಾವಿ: ಆಕಸ್ಮಿಕ ಬೆಂಕಿ ತಗುಲಿದ ಹಿನ್ನೆಲೆಯಲ್ಲಿ ಏಕಕಾಲಕ್ಕೆ ನಾಲ್ಕು ವಾಹನಗಳು ಹೊತ್ತಿ ಉರಿದ ಘಟನೆ ಬೆಳಗಾವಿ ನಗರದ ಎರಡನೇ ರೈಲ್ವೆ ಗೇಟ್ ಸಮೀಪದ ಹೆರವಾಡ್ಕರ್ ಶಾಲೆಯ ಬಳಿ ನಡೆದಿದೆ.
ಈ ಬೆಂಕಿ ಅವಘಡದಲ್ಲಿ ಟಾಟಾ ಓಮಿನಿ ಹಾಗೂ ಟಾಟಾ ಏಸ್ ಸೇರಿದಂತೆ ಒಟ್ಟು ನಾಲ್ಕು ವಾಹನಗಳು ಬೆಂಕಿಗಾಹುತಿಯಾಗಿವೆ. ಮೊದಲಿಗೆ ಒಂದು ವಾಹನಕ್ಕೆ ತಗುಲಿದ್ದ ಬೆಂಕಿ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ವ್ಯಾಪಿಸಿ ಒಟ್ಟು ನಾಲ್ಕು ವಾಹನಗಳಳು ಬೆಂಕಿಗೆ ಆಹುತಿಯಾಗಿವೆ. ಸುದ್ದಿ ತಿಳಿಸುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಕ್ಕೆ ಶ್ರಮಿಸಿದ್ದಾರೆ. ಈ ಘಟನೆ ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Previous article2000 ರೂ. ನೋಟು ಸ್ಥಗಿತ
Next articleಮರಕ್ಕೆ ಡಿಕ್ಕಿ ಹೊಡೆದ ಬೈಕ್: ಇಬ್ಬರು ಅಪ್ರಾಪ್ತರ ಸಾವು