ಬಾಗಲಕೋಟೆ: ನವನಗರದ ಸೆಕ್ಟರ್ ನಂ.೪೯ ಹಾಗೂ ವಾಂಬೆ ಕಾಲೊನಿಯ ಲಕ್ಷ್ಮೀ ದೇವಸ್ಥಾನದ ಬಳಿ ಕಲ್ಲು ತೂರಾಟ ನಡೆದಿರುವ ಘಟನೆ ವರದಿಯಾಗಿದೆ.
ಘಟನೆಯಲ್ಲಿ ಗಾಯಗೊಂಡಿರುವ ಎರಡೂ ಕೋಮಿನ ತಲಾ ಮೂರು ಯುವಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಎರಡೂ ಕೋಮಿನ ಮುಖಂಡರು, ಯುವಕರು ಪೊಲೀಸ್ ಠಾಣೆ ಹಾಗೂ ಜಿಲ್ಲಾಸ್ಪತ್ರೆ ಮುಂದೆ ಜಮಾಯಿಸಿದ್ದು, ರಾತ್ರಿ ೧೦ಗಂಟೆಯವರೆಗೆ ಪ್ರಕರಣ ದಾಖಲಾಗಿರಲಿಲ್ಲ.
ಘಟನೆಯಿಂದಾಗಿ ನವನಗರ ಪ್ರದೇಶ ಉದ್ವಿಗ್ನಗೊಂಡಿದೆ. ಡಿವೈಎಸ್ಪಿ ಪ್ರಶಾಂತ ಮನ್ನೋಳಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದು, ಎರಡೂ ಕಡೆಯವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಘಟನೆ ನಡೆದಿರುವ ವಾಂಬೆ ಕಾಲೊನಿ ಹಾಗೂ ಸೆಕ್ಟರ್ ನಂ.೪೯ರಲ್ಲಿ ಡಿಆರ್ ವಾಹನಗಳನ್ನು ನಿಯೋಜಿಸಲಾಗಿದೆ.