ತಾಸಿನಲ್ಲಿ ಮೂವರು ರೈತರ ಜೇಬಿಗೆ ಕತ್ತರಿ

0
35

ಕುಷ್ಟಗಿ: ಒಂದೇ ತಾಸಿನಲ್ಲಿ ಮೂವರು ರೈತರ ಕಿಸೆಗೆ ಕತ್ತರಿ ಹಾಕಿ 82,500 ಸಾವಿರ ರೂ‌. ದೋಚಿದ ಘಟನೆ ಸ್ಥಳೀಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಜರುಗಿದೆ.
ತಾಲೂಕಿನ ಹೊಸಹಳ್ಳಿ ಹನುಮಂತ ಹಂಚಿನಾಳ, ನಿಲೋಗಲ್ ಗ್ರಾಮದ ಹನುಮಪ್ಪ ರಗಣಿ ಮತ್ತು ತಾವರಗೇರಾದ ಶರಣಪ್ಪ ನಾರಿನಾಳ ಹಣ ಕಳೆದುಕೊಂಡ ರೈತರು.
ಎಮ್ಮೆ ಮಾರಿ ಬಂದ ಹಣದೊಂದಿಗೆ ಹನುಮಸಾಗರದ ಬಸ್‌ ಮೂಲಕ ಹೊಸಳ್ಳಿಗೆ ತೆರಳುತ್ತಿದ್ದ ಹನುಮಂತ ಹಂಚಿನಾಳ ಅವರ ಬಳಿ 24 ಸಾವಿರ ರೂ. ಹಣ ಕಳ್ಳತನವಾಗಿದ್ದು, ಕಳ್ಳತನದ ವೇಳೆ 10 ಸಾವಿರ ರೂ. ಹಣದ ಕಟ್ಟು ಕಳಚಿ ಹನುಮಂತ ಅವರ ಕಾಲಿನ ಮೇಲೆ ಬಿದ್ದಿದ್ದೆ. ಅದನ್ನು ಎತ್ತಿಕೊಳ್ಳುವಷ್ಟರಲ್ಲಿ ಕಳ್ಳ ಪರಾರಿಯಾಗಿದ್ದಾನೆ.
ಅದೇ ಬಸ್ ಏರುತ್ತಿದ್ದ ಹನುಮಪ್ಪ ರಗಣಿ ಅವರ ಜೇಬಿಗೆ ಕತ್ತರಿ ಹಾಕಿ 8,500 ರೂ. ಹಣ ದೋಚಲಾಗಿದೆ. ಮತ್ತೊಬ್ಬ ರೈತ ಶರಣಪ್ಪ ನಾರಿನಾಳ ಎಂಬುವವರು ಕುರಿ ಖರೀದಿಸಲು ಬಸ್ಸಿನಲ್ಲಿ ಹೋಗುತ್ತಿದ್ದಾಗ 60 ಸಾವಿರ ರೂ. ಹಣ ದೋಚಿ ಪರಾರಿಯಾಗಿದ್ದಾರೆ.

Previous articleಜೆಡಿಎಸ್ ಕಾರ್ಯಕ್ರಮದಲ್ಲಿ ಕಳ್ಳನ ಕೈ ಚಳಕ, ಕಾರ್ಯಕರ್ತರಿಂದ ಗೂಸಾ
Next articleಅಂತರಿಕ್ಷ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ