ಬೆಂಗಳೂರು: ತಾಯಿಯೇ ತನ್ನನ್ನು ಕೊಲ್ಲುವಂತೆ ಹೇಳಿದರು ಎಂದು ತಾಯಿಯನ್ನೆ ಹತ್ಯೆ ಮಾಡಿರುವ ಮಗಳು ಮೈಕೋಲೇಔಟ್ ಪೊಲೀಸ್ರಿಗೆ ಹೇಳಿರುವುದು ಬೆಚ್ಚಿ ಬೀಳುವಂತೆ ಮಾಡಿದೆ ಸೋನಾಲಿ ಸೇನ್ ಹೇಳಿಕೆ ನೀಡಿದ್ದು, ಬೆಂಗಳೂರಿನಲ್ಲಿ ತಾಯಿಯನ್ನು ಕೊಂದು ಸೂಟ್ ಕೇಸ್ನಲ್ಲಿ ಶವವನ್ನು ಮೈಕೋಲೇಔಟ್ ಪೊಲೀಸ್ ಠಾಣೆಗೆ ತಂದ ಸೋನಾಲಿ ಸೇನ್‌ರನ್ನು ಪೊಲೀಸರ ವಿಚಾರಣೆ ನಡೆಸಿದ ವೇಳೆ ಈ ಹೇಳಿಕೆ ನೀಡಿದ್ದಾಳೆ.
ಇದು ಪೊಲೀಸರನ್ನೇ ಬೆರಗಾಗಿಸಿದೆ. ಸೋನಾಲಿ ಸೇನ್ ಕುಟುಂಬ ಕೊಲ್ಕತ್ತಾ ಮೂಲದವರಾಗಿದ್ದು, ನಗರದ ಬಿಳೆಕಳ್ಳಿಯ ಎನ್ಎಸ್ ಆರ್ ಗ್ರೀನ್ ಅಪಾರ್ಟ್ಮೆಂಟ್ನ 106 ಫ್ಲಾಟ್ನಲ್ಲಿ ವಾಸವಾಗಿದ್ದರು. ನಿನ್ನೆ ಬೆಳಿಗ್ಗೆ 7 ಗಂಟೆಗೆ ಸೋನಾಲಿ ಸೇನ್ ತಾಯಿಗೆ ನಿದ್ದೆ ಮಾತ್ರೆ ನೀಡಿದ್ದರು. ಬಳಿಕ ಬೆಳಿಗ್ಗೆ 11 ಗಂಟೆಗೆ ತಾಯಿ ಹೊಟ್ಟೆ ನೊವ್ವು ಎಂದಿದ್ದರು. ಈ ವೇಳೆ ಸೋನಾಲಿ ಸೇನ್ ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಸೂಟ್ಕೇಸ್ನಲ್ಲಿ ತಂದೆಯ ಫೋಟೋ ಜತೆಗೆ ತಾಯಿ ಶವವಿಟ್ಟು, ಮೈಕೊಲೇಔಟ್ ಪೊಲೀಸ್ ಠಾಣೆಗೆ ಹೊತ್ತು ತಂದು ಶರಣಾಗಿದ್ದಾಳೆ. ತಾಯಿಯೇ ತನ್ನನ್ನು ಕೊಲ್ಲುವಂತೆ ಹೇಳಿದರು. ನಾನು ನಿನ್ನ ತಂದೆ ಬಳಿ ಹೊಗಬೇಕು ಎಂದು ಹೇಳಿದರಂತೆ. ಅದಕ್ಕೆ ಸೋನಾಲಿ ಸೇನ್ ನಿದ್ದೆ ಮಾತ್ರೆ ನೀಡಿದರಂತೆ. ಬಳಿಕ 11 ಗಂಟೆಗೆ ಪ್ಯಾರಲೀಸಿಸ್ ಆಗುತ್ತಿದೆ ಮಗಳೆ ಅಂದರಂತೆ. ಅಲ್ಲದೇ ನನ್ನನ್ನು ಕೊಂದು ಬಿಡು ಎಂದು ತಾಯಿಯೇ ಮಗಳಿಗೆ ಹೇಳಿದರಂತೆ. ಹೀಗಾಗಿ ಕೊಲೆ ಮಾಡಿದ್ದೇನೆ ಎಂದು ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.