ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗು ಕಿಡ್ನಾಪ್

0
10

ಹಾವೇರಿ: ನರ್ಸ್ ವೇಷ ಧರಿಸಿದ ಅಪರಿಚಿತ ಮಹಿಳೆಯೊಬ್ಬಳು ಒಂದು ದಿನದ ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಿಕೊಂಡು ಹೋಗಿರುವ ಘಟನೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದೆ.

ನರ್ಸ್ ವೇಷ ಧರಿಸಿದ ಮಹಿಳೆಯೊಬ್ಬಳು ಒಂದು ದಿನದ ಕಂದಮ್ಮನನ್ನು
ಎತ್ತಿಕೊಂಡು ಆಸ್ಪತ್ರೆಯಲ್ಲಿ ನಿಂತಿದ್ದ ಅಜ್ಜಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಅಜ್ಜಿಯನ್ನು ಯಾಮಾರಿಸಿ ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾಳೆ.

ಜಿಲ್ಲೆಯ ಬ್ಯಾಡಗಿ ತಾಲೂಕಿನ ಮತ್ತೂರು ಗ್ರಾಮದ ಗದಿಗೆಪ್ಪ ಕಂಬಾರ ಎಂಬುವರ ಪತ್ನಿ ಒಂದು ದಿನದ ಮೊಮ್ಮಗಳನ್ನು ಕರೆದುಕೊಂಡು ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ತೆರಳಿದ್ದರು ಎನ್ನಲಾಗಿದೆ. ಆಗ ನರ್ಸ್ ವೇಷ ಧರಿಸಿದ ಅಪರಿಚಿತ ಮಹಿಳೆ ಮಗುವನ್ನು ಜಿಲ್ಲಾಸ್ಪತ್ರೆಯಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಅಜ್ಜಿಯೊಂದಿಗೆ ಮಗುವನ್ನು ಕರೆದುಕೊಂಡು ಹೋಗಿದ್ದಾಳೆ. ನಂತರ ಅಜ್ಜಿಯನ್ನು ಯಾಮಾರಿಸಿ ಮಗುವನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾಳೆ. ಹೀಗಾಗಿ ನಮ್ಮ ಮೊಮ್ಮಗಳ ಕಿಡ್ನಾಪ್ ಆಗಿರುವ ಸಂಶಯವಿದ್ದು, ಮಗುವನ್ನು ಹುಡುಕಿಕೊಡಿ ಎಂದು ಮಗುವಿನ ಅಜ್ಜ ಗದಿಗೆಪ್ಪ ಕಂಬಾರ ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಿಡ್ನಾಪ್ ಆಗಿದೆ ಎನ್ನಲಾದ ಮಗು ಮತ್ತು ನರ್ಸ್ ವೇಷ ಧರಿಸಿದ ಸಿಸ್ಟರ್ ಚಹರೆ ಪಟ್ಟಿಯನ್ನು ಮಗುವಿನ ಪೋಷಕರು ಪೊಲೀಸರಿಗೆ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಹರೆಪಟ್ಟಿ ಹಾಗೂ ತಮ್ಮದೇಯಾದ ಮೂಲಗಳ ಆಧಾರದ ಮೇಲೆ ತನಿಖೆಗೆ ಇಳಿದಿದ್ದು, ಮಗು ಮತ್ತು ಮಗುವನ್ನು ಹೊತ್ತುಕೊಂಡು ಹೋಗಿರುವ ನರ್ಸ್ ವೇಷ ಧರಿಸಿದ ಸಿಸ್ಟರ್ ಪತ್ತೆಗಾಗಿ ಬಲೆ ಬೀಸಿದ್ದಾರೆ.

ನರ್ಸ್ ವೇಷ ಧರಿಸಿದ ಸಿಸ್ಟರ್ ಮಗುವನ್ನು ಜಿಲ್ಲಾಸ್ಪತ್ರೆಯಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೊರಟಿದ್ದರೂ ಮಗುವಿನ ಅಜ್ಜಿ ಅಥವಾ ಮಗುವಿನ ಪೋಷಕರು ಜಿಲ್ಲಾಸ್ಪತ್ರೆಯಲ್ಲಿದ್ದ ವೈದ್ಯರು ಅಥವಾ ಸಿಬ್ಬಂದಿ ಗಮನಕ್ಕೆ ತಂದಿರಲಿಲ್ಲ ಎನ್ನಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ವೇಷ ಧರಿಸಿದ ಸಿಸ್ಟರ್ ಮಗು ಕರೆದುಕೊಂಡು ಖಾಸಗಿ ಆಸ್ಪತ್ರೆಗೆ ಹೋಗುವಾಗ ವೈದ್ಯರು ಅಥವಾ ಸಿಬ್ಬಂದಿ ಗಮನಕ್ಕೆ ತರಬೇಕಿತ್ತು. ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಗಮನಕ್ಕೆ ತಂದಿದ್ದರೆ ನರ್ಸ್ ವೇಷ ಧರಿಸಿದ ಸಿಸ್ಟರ್ ಅಸಲೀಯತ್ತು ತಿಳಿಯುತ್ತಿತ್ತು. ಆದರೆ ಈಗ ಮಗು ಮಿಸ್ಸಿಂಗ್ ಆಗಿದ್ದು, ಮಗುವನ್ನು ಕಳೆದುಕೊಂಡಿರುವ ಮಗುವಿನ ಮನೆಯವರು ಮಗುವನ್ನು ನೆನೆದು ಕಂಗಾಲಾಗಿದ್ದಾರೆ.

Previous articleಇಂದು ಸಕ್ಕರೆ ನಾಡಲ್ಲಿ ಪ್ರಧಾನಿ ಮೋದಿ ಹವಾ….
Next articleಭಾರತಕ್ಕೆ 400: ವಿರಾಟ್ ಗೆ 75