ಚಿತ್ರದುರ್ಗ: ಚಿತ್ರದುರ್ಗದಲ್ಲಿ ಹಾಡುಹಗಲೇ ವ್ಯಕ್ತಿಗೆ ಚಾಕು ತೋರಿಸಿ ಹಣ ಲೂಟಿ ಮಾಡಿದ ಘಟನೆ ನಡೆದಿದೆ, ಐಯುಡಿಪಿ ಬಡಾವಣೆಯ 11ನೇ ಅಡ್ಡ ರಸ್ತೆಯಲ್ಲಿ ಈ ಘಟನೆ ಸಂಬವಿಸಿದ್ದು ಪ್ರಶಾಂತ್ ಸಂಸ್ಥೆಯೊಂದಕ್ಕೆ ಹಣ ತುಂಬಲು ಹೊರಟಿದ್ದ ಸಂದರ್ಭದಲ್ಲಿ ಚಾಕು ತೋರಿಸಿ ಹಣ ದರೋಡೆ ಮಾಡಿದ ನಾಲ್ವರು ದುಷ್ಕರ್ಮಿಗಳು ಆತನ ಬಳಿ ಇದ್ದ 6.5ಲಕ್ಷ ರೂ ಹಣ ಲೂಟಿ ಮಾಡಿ ಪರಾರಿಯಾಗಿದ್ದಾರೆ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.