ಚಾಕು ಇರಿತ: ಯುವಕ ಸಾವು

0
16
ಚಾಕು ಇರಿತ

ಕನಕಗಿರಿ(ಕೊಪ್ಪಳ): ಕ್ಷುಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ನಡೆದು, ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಂದ ಘಟನೆ ಗುರುವಾರ ಸಂಜೆ ಪಟ್ಟಣದಲ್ಲಿ ನಡೆದಿದೆ.
ಮೃತನನ್ನು ರವಿ(40) ಎಂದು ಗುರುತಿಸಲಾಗಿದೆ. ರವಿ ಹಾಗೂ ಮುತ್ತುರಾಜ ಎಂಬ ಇಬ್ಬರು ಯುವಕರು ಆತ್ಮೀಯ ಗೆಳೆಯರಾಗಿದ್ದರು. ಎರಡು ದಿನದ ಹಿಂದೆ ರವಿಯ ಬೈಕ್‌ನ್ನು ಗೆಳೆಯ ಮುತ್ತುರಾಜ ತೆಗೆದುಕೊಂಡು ಹೋಗಿ ತಡವಾಗಿ ಬಂದಿದ್ದನು. ರವಿಯು ಬೈಕ್ ತಡವಾಗಿ ಏಕೆ ತಂದಿರುವೆ’ ಎಂದು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಯುವಕ ಮುತ್ತುರಾಜ, ಈರುಳ್ಳಿ ಕತ್ತರಿಸುವ ಚಾಕುವಿನಿಂದ ತನ್ನ ಗೆಳೆಯನಿಗೆ ಇರಿದಿದ್ದನು. ಬಳಿಕ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿ ಸಾವನ್ನಪ್ಪಿದ್ದಾನೆ. ಆರೋಪಿ ಮುತ್ತುರಾಜ ಮೇಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಚಾಕು ಇರಿತ
Previous articlePAY CM ಪೋಸ್ಟರ್‌: ಐವರು ಪೊಲೀಸ್‌ ವಶಕ್ಕೆ, ಸರ್ಕಾರಕ್ಕೆ ಸವಾಲು ಹಾಕಿದ ಸಿದ್ದು-ಡಿಕೆಶಿ
Next articleನೇಪಥ್ಯಕ್ಕೆ ಸರಿದ ರಾಜ್ಯದ ಕೊನೆಯ ನೂಲಿನ ಗಿರಣಿ