ಚಹಾ ಉದ್ರಿ ಕೊಡಲಿಲ್ಲವೆಂದು ಕೊಂದು ಹಾಕಿದ!

0
26
ಚಹಾ

ಕುಷ್ಟಗಿ: ಚಹಾ ಉದ್ರಿ ಕೊಡದ ಅಂಗಡಿ ಮಾಲೀಕನನ್ನೇ ಕೊಲೆ ಮಾಡಿದ ಘಟನೆ ಇಲ್ಲಿನ ತೆಗ್ಗಿಹಾಳ ಗ್ರಾಮದಲ್ಲಿ ನಡೆದಿದೆ.
ತೆಗ್ಗಿಹಾಳ ಗ್ರಾಮದ ಶೇಖರಗೌಡ ಅಮರೇಗೌಡ ಪಾಟೀಲ ಕೊಲೆಯಾದ ವ್ಯಕ್ತಿ. ಮದ್ಯ ಸೇವಿಸಿ ಅಂಗಡಿ ಬಂದಿದ್ದ ವೆಂಕಟೇಶ ಚಿಗರಿ ಎಂಬಾತ ಶೇಖರಗೌಡರಿಗೆ ಚಹಾ ಕೊಡುವಂತೆ ಕೇಳಿದ್ದಾನೆ. ಆಗ ಉದ್ರಿ ಕೊಡುವುದಿಲ್ಲ ಎಂದಾಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಬಳಿಕ ವೆಂಕಟೇಶ ಕೋಪಗೊಂಡು ಮಾಲಿಕ ಶೇಖರಗೌಡನನ್ನು ಮೇಲಕ್ಕೆ ಎತ್ತಿ ನೆಲಕ್ಕೆ ಎಸೆದಿದ್ದಾನೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಅವರನ್ನು ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟಿದ್ದಾರೆ.

Previous articleಅಬಕಾರಿ ಟೆಂಡರ್ ಅವ್ಯವಹಾರ: ಕಾಂಗ್ರೆಸ್ ವಿವರ ನೀಡಲಿ: ಸಿಎಂ ಬೊಮ್ಮಾಯಿ
Next articleನಾಳೆಯಿಂದ ಸರಕಾರಿ ನೌಕರರ ಮುಷ್ಕರ