ಗೋಕರ್ಣ ಸಮುದ್ರದಲ್ಲಿ ಕೊಚ್ಚಿಹೋದ ಕಲಬುರ್ಗಿ ಯುವಕ

0
16
ಗೋಕರ್ಣ

ಗೋಕರ್ಣ: ಸಮುದ್ರ ಸ್ನಾನಕ್ಕೆ ತೆರಳಿದ್ದ ವೇಳೆ ರಭಸದ ಅಲೆಗೆ ಸಿಲುಕಿ ಪ್ರವಾಸಿಗ ಕೊಚ್ಚಿ ಹೋದ ಘಟನೆ ಮಂಗಳವಾರ ಮುಂಜಾನೆ ಇಲ್ಲಿನ ಮುಖ್ಯ ಕಡಲತೀರದಲ್ಲಿ ಸಂಭವಿಸಿದೆ.
ಕೊಚ್ಚಿ ಹೋದ ಯುವಕನನ್ನು ಶಿವಕುಮಾರ ಹುಚ್ಚಣ್ಣ(೨೩) ಎಂದು ತಿಳಿದು ಬಂದಿದೆ. ಕಲಬುರ್ಗಿಯಿಂದ ಒಟ್ಟು ಒಂಭತ್ತು ಯುವಕರ ತಂಡ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು ಬೆಳ್ಳಂಬೆಳ್ಳಗ್ಗೆ ಸಮುದ್ರ ಸ್ನಾನಕ್ಕೆ ತೆರಳಿದ್ದಾರೆ. ಅ ಸಮಯದಲ್ಲಿ ಸಮುದ್ರ ಸುಳಿಗೆ ಸಿಲುಕೆ ಓರ್ವ ಕೊಚ್ಚಿ ಹೋಗಿದ್ದಾನೆ. ಸ್ಥಳದಲ್ಲಿ ಜೀವರಕ್ಷಕ ಸಿಬ್ಬಂದಿ, ಕರಾವಳಿ ಕವಲು ಪಡೆ, ಸ್ಥಳೀಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಬೀಡು ಬಿಟ್ಟಿದ್ದು, ಯುವಕನ ಶೋಧ ಕಾರ್ಯಾಚರಣೆ ಮುಂದುವರಿಸಿದೆ. ಸಮುದ್ರ ಸ್ನಾನ ಮಾಡಿ ದೇವರ ದರ್ಶನಕ್ಕೆ ಬರುವವರಾಗಿದ್ದರು ಎಂದು ತಿಳಿದು ಬಂದಿದ್ದು, ಹಲವು ತಿಂಗಳ ಬಳಿಕ ಸಮುದ್ರದಲ್ಲಿ ನಡೆದ ಮೊದಲ ಅವಘಡವಾಗಿದೆ.

Previous articleದಡೇಸುಗೂರು ವಿರುದ್ಧ ಮತ್ತೊಂದು ದಾಖಲೆ ಬಿಡುಗಡೆ: ತಂಗಡಗಿ
Next articleಕಣ್ಣಿಗೆ ಖಾರದ ಪುಡಿ ಎರಚಿ ಆರು ಲಕ್ಷ ರೂ. ಲೂಟಿ