ಗೃಹಿಣಿ ಅನುಮಾನಾಸ್ಪದ ಸಾವು

0
15

ರಾಯಚೂರು: ಮಹಿಳೆಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬುಧವಾರ ಬೆಳಗಿನ ಜಾವ ರಾಯಚೂರಿನ ಬದ್ರಿನಾಥ ಕಾಲೋನಿಯಲ್ಲಿ ನಡೆದಿದೆ.
ಶಿಲ್ಪಾ(28) ಎಂಬಾಕೆಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮಗಳು ಸಾವು ಹಿನ್ನೆಲೆ ಘಟನಾ ಸ್ಥಳದಲ್ಲಿ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದು ಘಟನೆಗೆ ಪತಿ ಶರತ್, ತಾಯಿ ಶಶಿಕಲಾ ಮತ್ತು ತಂದೆ ಸುರೇಶ್​ ಕಾರಣ ಎಂದು ಆರೋಪ ಮಾಡಿದ್ದಾರೆ.
ಮಂಗಳವಾರ ರಾತ್ರಿ ಪತಿ ಹಾಗೂ ಪೋಷಕರು ಶಿಲ್ಪಾಳನ್ನ ಕೊಂದು ಮನೆ ಮೇಲಿಂದ ತಳ್ಳಿರುವ ಆರೋಪ ಮಾಡಿದ್ದಾರೆ. ಆಂಧ್ರ ಆದೋನಿ ಮೂಲದ ಶಿಲ್ಪಾ 2022ರ ಜೂನ್‌ನಲ್ಲಿ ಶರತ್‌ನನ್ನು ಮದುವೆಯಾಗಿದ್ದರು. ಸ್ಥಳಕ್ಕೆ ನೇತಾಜಿ ನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Previous articleಕಾವೇರಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ
Next articleತಮಿಳುನಾಡಿಗೆ ನಿರಂತರ ನೀರು: ಪ್ರತಿಭಟನೆ