ಗದಗ ಶಿಕ್ಷಕನಿಂದ ಹಲ್ಲೆಗೊಳಗಾದ ಶಿಕ್ಷಕಿ ಸಾವು

0
16
ಶಿಕ್ಷಕಿ

ಹುಬ್ಬಳ್ಳಿ: ಅತಿಥಿ ಶಿಕ್ಷಕನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಹ ಶಿಕ್ಷಕಿ ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ ನಲ್ಲಿ ಸಾವನ್ನಪ್ಪಿದ್ದಾರೆ.
ಶಿಕ್ಷಕನಿಂದ ಹಲ್ಲೆಗೊಳಗಾಗಿ ಗಂಭೀರ ಸ್ಥಿತಿ ತಲುಪಿದ್ದ ಗೀತಾ ಬಾರಕೇರ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗೀತಾ ಇಂದು ಸಾವನ್ನಪ್ಪಿದ್ದಾರೆ. ಡಿ19ರಂದು ಸಹ ಶಿಕ್ಷಕಿ ಗೀತಾ ಹಾಗೂ ಆಕೆಯ ಮಗ ವಿದ್ಯಾರ್ಥಿ ಭರತ್ (10) ಮೇಲೆ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಶಾಲೆಯಲ್ಲಿ ಸಲಾಕೆಯಿಂದ ಹಲ್ಲೆ ನಡೆಸಿದ್ದ. ಗದಗದ ಹದ್ಲಿಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿತ್ತು. ಶಿಕ್ಷಕನ ಏಟಿಗೆ ವಿದ್ಯಾರ್ಥಿ ಭರತ್ ಸಾವನ್ನಪ್ಪಿದ್ದ. ಇದೀಗ ಶಿಕ್ಷಕಿ ಗೀತಾ ಕೂಡ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಪ್ರಕರಣ ಸಂಬಂಧ ಆರೋಪಿ ಶಿಕ್ಷಕ ಮುತ್ತಪ್ಪನನ್ನು ಡಿ.20ರಂದು ಗದಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದರು.

Previous articleವಿವಾಹ ನಿಶ್ಚಯವಾಗಿದ್ದ ಯುವತಿಯ ಕೊಲೆ
Next articleಒಂದೇ ಮನೆಯಲ್ಲಿ ಮೂವರು ಆತ್ಮಹತ್ಯೆಗೆ ಶರಣು