ಖಾಸಗಿ ಬಸ್‌ ಪಲ್ಟಿ: ಪ್ರಯಾಣಿಕರು ಪಾರು

0
8

ಚಿತ್ರದುರ್ಗ:   ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗಿಡ್ಡಾಪುರ ಬಳಿ ನಡೆದಿದೆ.
ನಾಯಕನಹಟ್ಟಿ ಕಡೆಯಿಂದ ಗರಣಿ ಕ್ರಾಸ್ ಕಡೆಗೆ ಬಸ್ ಹೋಗುತ್ತಿತ್ತು, ಎದುರುಗಡೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು,
ಘಟನೆಯಲ್ಲಿ ಗಾಯ ಗೊಂಡವರನ್ನು ಚಳ್ಳಕೆರೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ದಾಖಲಿಸಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಗೆಲುವಿಗೆ ಆಶೀರ್ವಾದವಾದ ಅಸಿಂಧು ಮತ: ಚೀಟಿ ಮೂಲಕ ಗೆಲುವು
Next articleಉಚಿತ ಗ್ಯಾರಂಟಿಗೆ ಸರ್ವರ್ ಕಂಟಕ