ಹುಬ್ಬಳ್ಳಿ: ಖಾಸಗಿ ಬಸ್ ಅಪಘಾತದಲ್ಲಿ ಪಾದಾಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ರವಿವಾರ ಬೆಳಗ್ಗೆ ನಡೆದಿದೆ. ಇಲ್ಲಿನ ವಿ. ಜಾಕೋಬಾ ವಡಕಪೂಲ್(49) ಎಂಬಾತನೇ ಸಾವನ್ನಪ್ಪಿದ್ದಾರೆ. ಗದಗ ರಸ್ತೆಯ ರೈಲ್ವೆ ಕಲ್ಯಾಣ ಕೇಂದ್ರದ ಬಳಿ ಬೆಳಗ್ಗೆ ಖಾಸಗಿ ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಈ ಕುರಿತು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.