ಕೋಳಿ ಹಿಡಿದ ಚುನಾವಣಾ ಅಧಿಕಾರಿಗಳು

0
13

ಕುಷ್ಟಗಿ: ಮತದಾರರಿಗೆ ಹಂಚಲು ತಂದಿದ್ದ 80 ಕೋಳಿಗಳನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಮಡಕೇರಿ ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ಬಳಿ ನಡೆದಿದೆ. ಒಂದು ವಾಹನದಲ್ಲಿ ಕೋಳಿಗಳನ್ನು ತಂದು ಅವುಗಳನ್ನು ಜನರಿಗೆ ಕೊಡುತ್ತಿರುವ ಬಗ್ಗೆ ಬಂದ ಮಾಹಿತಿ ಅನ್ವಯ ದಾಳಿ ನಡೆಸಿದ ಫ್ಲೈಯಿಂಗ್ ಸ್ಕ್ವಾಡ್‌ನ ಸುರೇಂದ್ರ ಕಾಂಬಳೆ, ೮೦ ಕೋಳಿಗಳನ್ನು ವಶಪಡಿಸಿಕೊಂಡು, ಮಡಿಕೇರಿ ಗ್ರಾಮದ ಶರಣಗೌಡ ರಾಮನಗೌಡ ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Previous articleಲಿಂಗಾಯತರನ್ನು ಸಿಎಂ ಮಾಡುವುದಾಗಿ ಕಾಂಗ್ರೆಸ್ ಘೋಷಿಸಲಿ
Next articleಹೃದಯಾಘಾತದಿಂದ ಕಾಂಗ್ರೆಸ್ ಕಾರ್ಯಕರ್ತ ಸಾವು: ಪ್ರಚಾರ ಸಭೆ ರದ್ದು