ಕೋಲಾರ: 7 ಜನ ಪಿಎಫ್‌ಐ ಮುಖಂಡರ ಬಂಧನ

0
17
ಪಿಎಫ್‌ಐ

ಕೋಲಾರ: ಪಿಎಫ್‌ಐ ಸಂಘಟನೆ ಮುಖಂಡರ ಮನೆಗಳ ಮೇಲೆ ಬೆಳ್ಳಂ ಬೆಳ್ಳಗ್ಗೆ ಪೊಲೀಸರು ದಾಳಿ ನಡೆಸಿ 7 ಜನ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೋಲಾರದ ಎಸ್ಪಿ‌ ಡಿ.ದೇವರಾಜ್ ನೇತೃತ್ವದಲ್ಲಿ ದಾಳಿ ನಡೆಸಿ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಕೋಲಾರ ನಗರ ಠಾಣಾ ವ್ಯಾಪ್ತಿಯ 5 ಮಂದಿ ಗಲ್ ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ 75ನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದ ಪಿಎಫ್ ಸಂಘಟನೆ ಮುಖಂಡರಾದ ನವಾಜ್ ಪಾಷಾ, ವಸೀಂ ಪಾಷಾ, ಸಿದ್ದಿಕ್ ಪಾಷಾ, ಇಂಮ್ತಿಯಾಜ್ ಪಾಷಾ, ಶಬಾಜ್ ಪಾಷಾ, ಅಲ್ಲಬಕಾಶ್ ನೂರ್ ಪಷಾ ಬಂಧಿತರು. ಗಲಭೆ ಸೃಷ್ಟಿಗೆ ಯತ್ನ, ಅಕ್ರಮಕೂಟ, ಗಲಭೆಗೆ ಪ್ರಚೋದನೆ ಮಾಡಿದ ಆರೋಪದಡಿ ಏಳು ಜನರನ್ನು ಬಂಧಿಸಿದ್ದಾರೆ.

Previous articleಸಿಪಿಐ ಮೇಲೆ ಹಲ್ಲೆ ಪ್ರಕರಣ: 8 ಜನರ ಬಂಧನ
Next articleಕಲಘಟಗಿ: ಪಿಎಫ್ಐ ಸಂಘಟನೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಇಬ್ಬರ ಬಂಧನ