ಕಾಲುವೆಯಲ್ಲಿ ಜಾರಿ ಬಿದ್ದು ಬಾಲಕ ಸಾವು

0
12
ಬಾಲಕ

ವಿಜಯಪುರ: ಕೊಲ್ಹಾರ ತಾಲೂಕಿನ ಚಿಕ್ಕ ಆಸಂಗಿ ಗ್ರಾಮದ ಹೊರ ವಲಯದಲ್ಲಿ ಹಾದು ಹೋಗಿರುವ ಕಾಲುವೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬಾಲಕನೋರ್ವ ಸಾವನ್ನಪ್ಪಿದ್ದಾನೆ.
ಕಲ್ಲಯ್ಯ ಹಿರೇಮಠ(13) ಮೃತ ಬಾಲಕ. ಶಾಲೆಯಿಂದ ವಾಪಸ್ ಮನೆಗೆ ಬಂದಿದ್ದ ಬಾಲಕ ಜಮೀನಿನಲ್ಲಿರೋ ತಂದೆ ಗಂಗಯ್ಯ ಹಿರೇಮಠ ಅವರನ್ನು ಭೇಟಿಯಾಗಲು ತೆರಳಿದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸಂಜೆ ಮನೆಗೆ ಬಾರದ ಬಾಲಕನಿಗಾಗಿ ಶೋಧ‌ ನಡೆಸಿದ್ದ ಪೋಷಕರಿಗೆ ಇಂದು‌ ಬೆಳಿಗ್ಗೆ ಕಾಲುವೆಯಲ್ಲಿ ಬಾಲಕನ ಶವ ಪತ್ತೆಯಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

Previous articleಹಸಿರು ಸಂಚಾರಿ ಪಥ ಈಗ ಒಣ ಒಣ'!
Next articleರೂಪಾ-ರೋಹಿಣಿಯನ್ನು ಅಮಾನತು ಮಾಡಿ