ಕಾರ್ಪೋರೆಟರ್ ಪತಿ ಮೇಲೆ ಗುಂಡಿನ ದಾಳಿ

0
10
ಗುಂಡಿನ ದಾಳಿ

ವಿಜಯಪುರ: ದಾಪುರ ಕಾಲನಿಯಲ್ಲಿ ಬೆಳಂಬೆಳಗ್ಗೆ ಗುಂಡಿನ ದಾಳಿ ನಡೆದಿದ್ದು, ಹೈದರ್ ಅಲಿ ನದಾಫ್ ದಾರುಣವಾಗಿ ಹತ್ಯೆಗೀಡಾಗಿದ್ದಾನೆ. ಇತ್ತಿಚೆಗಷ್ಟೆ ನಡೆದ ಪಾಲಿಕೆ ಚುನಾವಣೆಯಲ್ಲಿ ಹೈದರ್ ನದಾಫ್ ವಾರ್ಡ್ ನಂ.19 ರಿಂದ ತಮ್ಮ ಪತ್ನಿ ನಿಶಾತ್ ನದಾಫ್ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದರು. ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಬಡ್ಡಿ ಹಣಕಾಸಿನ ವ್ಯವಹಾರ ನಡೆಸುತ್ತಿದ್ದ. ಚಂದಾಪೂರ ಕಾಲೋನಿಯಲ್ಲಿ ಇರುವ ತನ್ನ ನಿವಾಸದಿಂದ ಬಳಿ ಕಾರು ಹತ್ತುತ್ತಿದ್ದ ವೇಳೆ ಹೈದರ್ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು, ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Previous articleಮಲ್ಲಿಕಾರ್ಜುನ ಖರ್ಗೆ ಹತ್ಯೆಗೆ ಸಂಚು: ಆಡಿಯೋ ಲೀಕ್‌
Next articleನೀರಜ್‌ ಚೋಪ್ರಾ ಸಾಧನೆಗೆ ಮೋದಿ ಶ್ಲಾಘನೆ