ಕಾರು-ಲಾರಿ ಮಧ್ಯೆ ಭೀಕರ ಅಪಘಾತ: ನಾಲ್ವರ ಸಾವು

0
10

ನಾಗಮಂಗಲ (ಮಂಡ್ಯ): ಬೆಳ್ಳಂಬೆಳಿಗ್ಗೆ ಟಿಪ್ಪರ್ ಲಾರಿ ಹಾಗೂ ಸ್ಯಾಂಟ್ರೋ ಕಾರ್ ನಡುವೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ದುರ್ಮರಣವಾಗಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ನಾಗಮಂಗಲ ತಾಲೂಕಿನ ತಿರುಮಲಾಪುರ ಗ್ರಾಮದ ಶನಿದೇವರ ದೇವಸ್ಥಾನದ ಎದುರು ಬೆಳಗಿನ ಜಾವ 4.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ.

ಎಂ ಸ್ಯಾಂಡ್ ತುಂಬಿಕೊಂಡು ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರಿ ಡಿಕ್ಕಿ ಹೊಡೆದಿದೆ. ಮಾಗಡಿ ತಾಲೂಕಿನ ಕುದೂರು ಹೋಬಳಿ ಲಕ್ಕೇನಹಳ್ಳಿ ಗ್ರಾಮದ ಹೇಮಂತ್, ಹುಳಿಯಾರಿನ ಶರತ್ ಎಂಬ ಇಬ್ಬರ ವಿಳಾಸ ತಿಳಿದುಬಂದಿದ್ದು, ಮತ್ತಿಬ್ಬರ ವಿಳಾಸ ತಿಳಿದುಬಂದಿಲ್ಲ. ನಾಗಮಂಗಲ ತಾಲ್ಲೂಕಿನ ಬಿಜಿ ನಗರದ ಏಮ್ಸ್ ಆಸ್ಪತ್ರೆಯ ಶವಗಾರಕ್ಕೆ ಮೃತದೇಹಗಳ ರವಾನೆ ಮಾಡಲಾಗಿದ್ದು,ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Previous articleನೂತನ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಗಲಾಟೆ : ಯುವಕನ ಕೊಲೆ
Next articleರೈಲು ದುರಂತದಲ್ಲಿ ಕನ್ನಡಿಗರು ಸೇಫ್‌: ಲಾಡ್