ಧಾರವಾಡ: ಕ್ಷುಲ್ಲಕ ಕಾರಣಕ್ಕಾಗಿ ಕೇಂದ್ರ ಕಾರಾಗೃಹದ ಸಿಬ್ಬಂದಿ ಮತ್ತು ಕೈದಿ ಮಧ್ಯೆ ಮಾರಾಮಾರಿ ನಡೆದಿದೆ.
ಜೈಲು ಸಿಬ್ಬಂದಿ ಮೋಹನ ಸಿದ್ದಪ್ಪ ಬಡಿಗೇರ ಹಾಗೂ ಪ್ರಶಾಂತ ಅಲಿಯಾಸ್ ಪಾಚು ಎಂಬುವವರೇ ಜೈಲಿನಲ್ಲಿ ಹೊಡೆದಾಡಿಕೊಂಡಿರುವುದು. ಗಾಯಗೊಂಡ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕೈದಿ ಪ್ರಶಾಂತಗೆ ಪಕ್ಕಕ್ಕೆ ಸರಿದು ನಿಲ್ಲುವಂತೆ ಹೇಳಿದ್ದೇ ತಡ ಸಿಬ್ಬಂದಿ ಮೋಹನ ಮೇಲೆ ಬಾಚಣಿಕೆಯಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.