ಕಣ್ಣಿಗೆ ಖಾರದ ಪುಡಿ ಎರಚಿ ಆರು ಲಕ್ಷ ರೂ. ಲೂಟಿ

0
16
ಖಾರದ ಪುಡಿ

ಹಗರಿಬೊಮ್ಮನಹಳ್ಳಿ: ಕಣ್ಣಿಗೆ ಖಾರದ ಪುಡಿ ಎರಚಿ 6 ಲಕ್ಷ ರೂಪಾಯಿ ಹಣದ ಚೀಲ ಎಗರಿಸಿಕೊಂಡು ಹೋದ ಘಟನೆ ಪಟ್ಟಣದ ಬಸವೇಶ್ವರ ಬಜಾರದಲ್ಲಿ ಮಂಗಳವಾರ ನಡೆದಿದೆ.
ಹಗರಿಬೊಮ್ಮನಹಳ್ಳಿಯ ವರ್ತಕ ಶ್ರೀವಾಸ ಶೆಟ್ಟಿ ಎಂಬವರು ಅಂಗಡಿ ಗುಮಾಸ್ತ ಸಂತೋಷ ಅವರ ಕೈಯಲ್ಲಿ 6 ಲಕ್ಷ ರೂಪಾಯಿ ನಗದು ಹಣವನ್ನು ಬ್ಯಾಗ್‌ನಲ್ಲಿ ಹಾಕಿ ಪಟ್ಟಣದ ಮಾನ್ವಿ ಪಟ್ಟಣ ಸಹಕಾರಿ ಬ್ಯಾಂಕಿಗೆ ಕಟ್ಟಲು ಕಳುಹಿಸಿದ್ದರು. ಹಣದ ಚೀಲ ಹಿಡಿದುಕೊಂಡು ಎಸ್‌ಬಿಐ ರೈಲ್ವೆ ಗೇಟ್‌ನಿಂದ ಒಳಗಡೆ ನಿರ್ಜನ ಪ್ರದೇಶದಲ್ಲಿ ಹೋಗುತ್ತಿದ್ದಾಗ
ಅಪರಿಚಿತ ವ್ಯಕ್ತಿ ಸಂತೋಷನ ಕಣ್ಣಿಗೆ ಖಾರದ ಪುಡಿ ಎರಚಿದ. ೬ ಲಕ್ಷ ರೂ. ಹಣದ ಬ್ಯಾಗ್‌ನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ನಂತರ ಸ್ಥಳಕ್ಕೆ ಪಿಎಸ್‌ಐ ಸರಳಾ ಅವರು ಆಗಮಿಸಿ ಪರಿಶೀಲನೆ ಮಾಡಿದರು. ಮಾಲೀಕ ಶ್ರೀವಾಸ ಶೆಟ್ಟಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕ್ರಮ ಕೈಗೊಂಡಿದ್ದಾರೆ.

Previous articleಗೋಕರ್ಣ ಸಮುದ್ರದಲ್ಲಿ ಕೊಚ್ಚಿಹೋದ ಕಲಬುರ್ಗಿ ಯುವಕ
Next articleಗುಂಡು ಹಾರಿಸಿ ಪತ್ನಿಗೆ ಬೆದರಿಸಿದ ಪತಿ ಅಂದರ್