ಎಂಇಎಸ್ ವಿರುದ್ಧ ಕೇಸ್

0
21
MES


ಬೆಳಗಾವಿ: ಯಾವುದೇ ಅನುಮತಿ ಇಲ್ಲದಿದ್ದರೂ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಕರಾಳ ದಿನ ಆಚರಣೆ ಮಾಡಿದ ಎಂಇಎಸ್ನ 18 ಜನರ ವಿರುದ್ಧ ಪೊಲೀಸರು ಸ್ವಯಂಕೃತ ದೂರು ದಾಖಲು ಮಾಡಿಕೊಂಡಿದ್ದಾರೆ,
ಮಾಲೋಜಿರಾವ್ ಅಷ್ಟೇಕರ, ಮನೋಹರ ಕಿಣೇಕರ, ಪ್ರಕಾಶ ಮರಗಾಳಿ,ರಣಜಿತ್ ಚವ್ವಾಣ, ಅಮರ ಯಳ್ಳೂರಕರ, ನಗರಸೇವಕ ರವಿ ಸಾಳುಂಕೆ, ವೈಶಾಲಿ ಭಾತಖಾಂಡೆ, ಗಜಾನನ ಪಾಟೀಲ, ಶಿವಾಕೊ ಸುಂಟಕರ, ಎಂ.ಜೆ. ಪಾಟೀಲ, ಆರ್.ಎಂ. ಚೌಗಲೆ, ನೇತಾಜಿ ಜಾಧವ, ಸರಿತಾ ಪಾಟೀಲ, ಸರಸ್ವತಿ ಪಾಟೀಲ, ವಿಕಾಸ ಕಲಘಟಗಿ, ಇನ್ನೂ ಕೆಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ನಿನ್ನೆ ನಡೆದ ಕರಾಳ ದಿನ ವಿಡಿಯೋ ಆಧರಿಸಿ ಕೇಸ್ ದಾಖಲು ಮಾಡಿಕೊಳ್ಳುತ್ತಿದ್ದಾರೆ, ಶುಭಂ ಶೆಳಕೆ ಮತ್ತು ರಮಾಕಾಂತ ಕೊಂಡುಸ್ಕರ ಹೆಸರೂ ಸಹ ಸೇರ್ಪಡೆ ಆಗುವ ಸಾಧ್ಯತೆಗಳಿವೆ

Previous articleಭೀಕರ ರಸ್ತೆ ಅಪಘಾತ: ಐವರು ಸ್ಥಳದಲ್ಲೆ ಸಾವು
Next articleಇಂದಿನಿಂದಲೇ ಹೊಸ ಬಿಪಿಎಲ್, ಎಪಿಎಲ್ ಕಾರ್ಡ್ ವಿತರಣೆ ಅರಂಭ