ಈಜಲು ಹೋದ ಬಾಲಕರಿಬ್ಬರು ನೀರುಪಾಲು

0
13

ದಾವಣಗೆರೆ: ಈಜುಕೊಳದಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವುಕಂಡ ಘಟನೆ ದೇವರಾಜ ಅರಸ್ ಬಡಾವಣೆಯಲ್ಲಿರುವ ಈಜುಕೊಳದಲ್ಲಿ ನಡೆದಿದೆ.
ಮುಬಾರಕ್ (15), ತಾಜುದ್ದೀನ್ (16) ಮೃತ ಬಾಲಕರು. ಈಜಲು ಬಾರದ ಬಾಲಕರಿಬ್ಬರು ಮನೆಯಲ್ಲಿ ತಿಳಿಸಿದೆ ಸ್ನೇಹಿತ ಸೂಫಿಯಾನಾನೊಂದಿಗೆ ಶುಕ್ರವಾರ ಸಂಜೆ ಈಜುಕೊಳಕ್ಕೆ ಹೋಗಿದ್ದಾರೆ. ಈಜುತ್ತಿದ್ದ ಇಬ್ಬರು ಬಹಳ ಸಮಯದವರೆಗೆ ಮೇಲೆ ಬಾರದಿದ್ದಾಗ ಅನುಮಾನಗೊಂಡ ಸೂಫಿಯಾನ ಈಜುಕೊಳ ಮುಖ್ಯಸ್ಥರಿಗೆ ಮತ್ತು ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾನೆ. ಆದರೆ ತಕ್ಷಣ ಸ್ಪಂದಿಸದೇ ಹೋದಾಗ ಬಾಲಕರಿಬ್ಬರ ಮೃತದೇಹಗಳನ್ನು ಕಂಡು ಬಾಲಕರ ಕುಟುಂಬಗಳಿಗೆ ಮಾಹಿತಿ ನೀಡಿದ್ದಾನೆ.
ಬಾಲಕರಿಬ್ಬರ ಸಾವಿಗೆ ಈಜುಕೊಳದ ಸಿಬ್ಬಂದಿಗಳು ಮತ್ತು ಮಹಾನಗರ ಪಾಲಿಕೆ ಕಾರಣ ಎಂದು ಆರೋಪಿಸಿ ಬಾಲಕರಿಬ್ಬರ ಪೋಷಕರು ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Previous articleದ.ಕ ಕಾಂಗ್ರೆಸ್‌ನಿಂದ ಸಂಭ್ರಮಾಚರಣೆ
Next articleಐದೂ ಗ್ಯಾರಂಟಿಗೆ ತಾತ್ವಿಕ ಒಪ್ಪಿಗೆ