ಇಬ್ಬರು ಯುವಕರ ಕೊಚ್ಚಿ ಕೊಲೆ

0
18
ಕೊಲೆ

ಬೆಳಗಾವಿ: ಸುಳೆಭಾವಿ ಗ್ರಾಮದಲ್ಲಿ ಇಬ್ಬರು ಯುವಕರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಇಂದು ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ನಡೆದಿದೆ.
ಸುಳೆಭಾವಿ ಗ್ರಾಮದ ಮಹೇಶ್ ರಾಮಚಂದ್ರ ಮುರಾರಿ(25), ಪ್ರಕಾಶ್ ನಿಂಗಪ್ಪಾ ಉಪರಿ ಪಾಟೀಲ(22) ಎಂಬಾತರು ಹತ್ಯೆಗೀಡಾದ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಸುಳೆಭಾವಿ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಬಳಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ ಎನ್ನಲಾಗಿದೆ. ಇದಕ್ಕೆ ಹಳೆಯ ವೈಷಮ್ಯವೇ ಕಾರಣವೆಂದು ತಿಳಿದು ಬಂದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿದ್ದಾರೆ.

Previous articleಮಹಾ ಚೀಟಿ ಎಡವಟ್ಟು ಐವರ ಮೇಲೆ ಆಪಾದನಾ ಪಟ್ಟಿ
Next articleಆತ್ಮಹತ್ಯೆಗೆ ಯತ್ನ, ವಯೋವೃದ್ಧೆ ರಕ್ಷಿಸಿದ ಯುವಕ